ಪ್ಯಾರಿಸ್: ಕುರ್ದಿಶ್ ಸಮುದಾಯದ ಮೇಲೆ ನಡೆದ ಶೂಟೌಟ್, ಜನಾಂಗೀಯ ದಾಳಿ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಪ್ಯಾರಿಸ್‍ನಲ್ಲಿ (Paris) ವ್ಯಾಪಕ ಪ್ರತಿಭಟನೆಗಳು (Protest) ನಡೆಯುತ್ತಿವೆ.
ಡಿ.23 ರಂದು ನಡೆದ ಗುಂಡಿನ ಚಕಮಕಿಯನ್ನು ವಿರೋಧಿಸಿ ಫ್ರಾನ್ಸ್‌ನಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದೀಗ ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ವಾಹನಗಳನ್ನು ಉರುಳಿಸಿ, ಕೆಲ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ಮೇಲೂ ಹಲ್ಲೆಗಳು ನಡೆದಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
Advertisement
Advertisement
ರಿಪಬ್ಲಿಕ್ ಸ್ಕ್ವೇರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಾಕಲಾಗಿದ್ದು, ಮಳಿಗೆಗಳ ಕಿಟಕಿಗಳನ್ನು ಹಾನಿಗೀಡು ಮಾಡಲಾಗಿದೆ. ಹಿಂಸಾಚಾರದ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಬಿತ್ತು ಬರೋಬ್ಬರಿ 16 ಸಾವಿರ ರೂ. ದಂಡ
Advertisement
Advertisement
ಘಟನೆಯೇನು?: ಸಾಂಸ್ಕೃತಿಕ ಕೇಂದ್ರದ ಮೇಲೆ ಗನ್ ಮ್ಯಾನ್ ಓರ್ವ ಶುಕ್ರವಾರದಂದು ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಮೂವರು ಕುರ್ದಿಗಳು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ 64 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಶಾಲೆಯ ಕಬ್ಬಿಣದ ಗೇಟ್ ಬಿದ್ದು 8ರ ಬಾಲಕಿ ಸಾವು
ಬಂಧಿತ ವ್ಯಕ್ತಿ ತನ್ನನ್ನು ತಾನು ಜನಾಂಗೀಯ ದ್ವೇಷಿ ಹಾಗೂ ವಿದೇಶಿಗರನ್ನು ದ್ವೇಷಿಸುವವ ಎಂದು ಹೇಳಿಕೊಂಡಿದ್ದ. ಜೊತೆಗೆ ಈ ದಾಳಿಯನ್ನು ನಡೆಸಲು 6 ವರ್ಷಗಳ ಹಿಂದೆ ಶಂಕಿತನ ಮನೆಯಲ್ಲಿ ನಡೆದ ಕಳ್ಳತನವೇ ಕಾರಣವಾಗಿದೆ. ಆದರೆ ಆರೋಗ್ಯದ ಕಾರಣದಿಂದಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳಿಯ ಪೊಲೀಸರು ಹೇಳಿದ್ದಾರೆ. ಈ ಘಟನೆಯ ಬೆನ್ನಲ್ಲೇ ಪ್ಯಾರಿಸ್‍ನಲ್ಲಿ ಶಾಂತಿ ಕದಡಿದೆ.