ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮೊನ್ನೆಯಷ್ಟೇ ಸಪ್ತಪದಿ ತುಳಿದಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಹನಿಮೂನ್ ಗಿಂತಲೂ ನಂಬಿಕೊಂಡಿರುವ ಕೆಲಸವೇ ಮುಖ್ಯ ಎಂದುಕೊಂಡು ಮದುವೆಯಾದ ಒಂದೇ ವಾರಕ್ಕೆ ಶೂಟಿಂಗ್ ಗೆ ಮರಳಿದ್ದಾರೆ. ಸದ್ಯ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರಂತೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?
ಮದುವೆಯ ನಂತರ ತಿರುಪತಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡಿದ್ದ ದಂಪತಿಗಳು, ಆ ನಂತರ ಹನಿಮೂನ್ಗೆ ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ, ಮದುವೆ ಕಾರಣದಿಂದಾಗಿ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ನಯನತಾರಾ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ.
ಶಾರುಖ್ ಖಾನ್ ಮತ್ತು ನಯನತಾರಾ ಕಾಂಬಿನೇಷನ್ ನ ಜವಾನ್ ಸಿನಿಮಾದಲ್ಲಿ ವಿಶೇಷ ಕಥೆಯೊಂದನ್ನು ಹೆಣೆದಿದ್ದಾರಂತೆ ನಿರ್ದೇಶಕ ಅಟ್ಲಿ. ಈಗಾಗಲೇ ಒಂದು ಹಂತದ ಶೂಟಿಂಗ್ ಕೂಡ ಮುಗಿದಿದ್ದು, ನಯನತಾರಾ ಮದುವೆಗಾಗಿ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸಿದ್ದರಂತೆ. ಇದೀಗ ಮತ್ತೊಂದು ಹಂತದ ಚಿತ್ರೀಕರಣವನ್ನು ಶುರು ಮಾಡಿದ್ದಾರಂತೆ. ಮದುವೆಯ ನಂತರ ತಾವು ಒಪ್ಪಿಕೊಳ್ಳಲಿರುವ ಸಿನಿಮಾಗಳಲ್ಲಿ ಕೆಲವು ಮಾರ್ಪಾಟು ಮಾಡಿಕೊಂಡಿರುವ ನಯನತಾರಾ, ಈ ಸಿನಿಮಾದಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರಂತೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?
ಮದುವೆಯ ನಂತರ ಅರೆಬರೆ ಬಟ್ಟೆ ಹಾಕುವಂತಹ ಪಾತ್ರಗಳನ್ನು ಮತ್ತು ಡಬಲ್ ಮೀನಿಂಗ್ ಹೇಳುವಂತಹ ಡೈಲಾಗ್ ಗಳನ್ನು ಹೇಳುವುದಿಲ್ಲ ಎಂದು ಈಗಾಗಲೇ ನಯನತಾರಾ ಡಿಸೈಡ್ ಮಾಡಿಕೊಂಡಿದ್ದಾರಂತೆ. ಅಲ್ಲದೇ,. ಕುಟುಂಬ ಸಮೇತ ನೋಡುವಂತಹ ಸಿನಿಮಾ ಅಥವಾ ಪಾತ್ರಗಳು ಇದ್ದರೆ ಮಾತ್ರ ತಾವು ಅಂತಹ ಸಿನಿಮಾಗಳಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಹಾಗಾಗಿ ರಿಯಲ್ ನಯನತಾರಾ ಅವರನ್ನು ಜವಾನ್ ಸಿನಿಮಾದಲ್ಲಿ ನೋಡಬಹುದಾಗಿದೆ.