ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಯಾವುದೇ ವಿಡಿಯೋ ಚಿತ್ರೀಕರಣಕ್ಕೆ ಅವಕಾಶವಿರಲಿಲ್ಲ. ಮೆಟ್ರೋ ಆರಂಭವಾದಾಗ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಅದರೆ ಕ್ರಮೇಣ ಸೆಕ್ಯೂರಿಟಿ ಕಾರಣದಿಂದ ಮೆಟ್ರೋ ನಿಲ್ದಾಣದಲ್ಲಾಗಲಿ, ಮೆಟ್ರೋ ಟ್ರೈನ್‌ನಲ್ಲಿ ಆಗಲಿ ವಿಡಿಯೋ ಚಿತ್ರೀಕರಣವನ್ನ ಮೆಟ್ರೋ ನಿಷೇಧಿಸಿತ್ತು. ಈಗ ಮತ್ತೆ ಸಿನಿಮಾ, ಸಿರಿಯಲ್ ಸೇರಿದಂತೆ ಎಲ್ಲ ರೀತಿಯ ಶೂಟಿಂಗ್‌ಗೆ ಮೆಟ್ರೋ ಅನುಮತಿ ನೀಡಿದೆ.
ಹೌದು, ಮೆಟ್ರೋ ಸೀನ್ ಶೂಟ್ ಮಾಡಲು ಸಾಕಷ್ಟು ಮನವಿಗಳು ಬರುತ್ತಿರುವ ಕಾರಣ ನಮ್ಮ ಮೆಟ್ರೋದವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣ ಮಾಡಲು ಇಚ್ಛಿಸುವವರು ಮೆಟ್ರೋಗೆ ಅರ್ಜಿ ಸಲ್ಲಿಕೆ ಮಾಡಿ ಅನುಮತಿ ಪಡೆದು ಶೂಟಿಂಗ್ ಮಾಡಬಹುದಾಗಿದೆ. ಆದರೆ ಬಿಎಂಆರ್‌ಸಿಎಲ್ ವಿಧಿಸುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ
Advertisement
Advertisement
ಚೆನ್ನೈ ಮತ್ತು ದೆಹಲಿಯಲ್ಲಿ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಅವಕಾಶವಿದೆ. ಅದೇ ರೀತಿ ಬೆಂಗಳೂರಿನಲ್ಲೂ ಅವಕಾಶ ಕೊಡಿ ಎಂದು ಸಾಕಷ್ಟು ನಿರ್ಮಾಪಕರು ಮೆಟ್ರೋಗೆ ಮನವಿ ಮಾಡಿದ್ದರು. ಈಗ ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ.
Advertisement
Advertisement
ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಕಂಡೀಷನ್ ಏನು..?
ಶೂಟಿಂಗ್ ಮಾಡುವವರು ಮೊದಲು ಅರ್ಜಿ ಹಾಕಬೇಕು. ಅರ್ಜಿ ಜೊತೆಗೆ ಶೂಟಿಂಗ್ ಪ್ಲಾನ್ ಕೂಡ ನೀಡಬೇಕು. ಚಿತ್ರೀಕರಣ ಮಾಡುವ ಸ್ಟೋರಿಯನ್ನೂ ಸಹ ನೀಡಬೇಕು. ಬಿಎಂಆರ್‌ಸಿಎಲ್ ಕಮಿಟಿಯಿಂದ ಅರ್ಜಿ ಪರಿಶೀಲಿಸಿ ಅನುಮತಿ ನೀಡಲಾಗುವುದು. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಇಂತಿಷ್ಟು ಸಮಯ ನಿಗದಿ ಮಾಡಲಿದೆ. ಚಿತ್ರೀಕರಣಕ್ಕೆ ಸೇಫ್ಟಿ ಡೆಪಾಸಿಟ್ ಅಂತ 6 ಲಕ್ಷ ನೀಡಬೇಕು. ಚಿತ್ರೀಕರಣದ ಆಧಾರದ ಮೇಲೆ ಪಾವತಿಸಬೇಕಾದ ದರ ನಿಗದಿ ಮಾಡಲಾಗುವುದು. ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಶೇ.25ರಷ್ಟು ರಿಯಾಯಿತಿ ಇರಲಿದೆ. ಇದನ್ನೂ ಓದಿ: ಮೆಗಾ ರಿಯಾಲಿಟಿ ಚೆಕ್‍ಗೆ ಭರ್ಜರಿ ಇಂಪ್ಯಾಕ್ಟ್- PUBLiC TVಗೆ ಸಾರ್ವಜನಿಕರು ಧನ್ಯವಾದ