ಸಲ್ಮಾನ್ ಮನೆ ಮುಂದೆ ಗುಂಡಿನ ದಾಳಿ: ಸ್ಪೋಟಕ ವಿಚಾರ ಬಾಯ್ಬಿಟ್ಟ ಆರೋಪಿ

Public TV
1 Min Read
salman

ಲ್ಮಾನ್ ಖಾನ್ ಮನೆಯ ಮುಂದೆ ಇದೇ ಭಾನುವಾರ ಗುಂಡಿನ ದಾಳಿ (Shooting) ನಡೆದಿತ್ತು. ಮುಂಬೈಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ ಇದಾಗಿತ್ತು. ಗುಂಡಿನ ದಾಳಿ ಮಾಡಿದ್ದ ದುರುಳರನ್ನು ಹೆಡೆಮೂರಿಕಟ್ಟಿ ಬಂಧಿಸಿದ್ದಾರೆ ಪೊಲೀಸರು. ಅವರ ವಿಚಾರಣೆ ಮಾಡುತ್ತಿದ್ದು, ಈ ವೇಳೆ ಸ್ಪೋಟಕ ಮಾಹಿತಿ ನೀಡಿದ್ದಾರಂತೆ. ಗುಂಡಿನ ದಾಳಿ ಮಾಡಿ ಬೆದರಿಸೋದಕ್ಕೆ ನಾಲ್ಕು ಲಕ್ಷ ರೂಪಾಯಿ ಸುಪಾರಿ ಪಡೆದಿದ್ದರಂತೆ.

salman khan 3

ಈ ಘಟನೆ ನಡೆಯುತ್ತಿದ್ದಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸಲ್ಮಾನ್ ಖಾನ್ (Salman Khan) ಅವರನ್ನು ಭೇಟಿಯಾಗಿದ್ದರು. ಸಿಎಂ ಆಗಮಿಸುತ್ತಿದ್ದಂತೆ ನಟನ ಮನೆಯ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನಟನ ಮನೆಗೆ ಭೇಟಿ ನೀಡಿದ ಸಿಎಂ, ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಅನ್ನು ಮುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

salman khan and lawrence bishnoi 1

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ಸಲ್ಮಾನ್ ಖಾನ್‌ಗೆ ಹೇಳಿದ್ದೇನೆ. ಗುಂಡಿನ ದಾಳಿ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಮೂಲವನ್ನು ಹುಡುಕುತ್ತಿದ್ದು, ಯಾರನ್ನೂ ಬಿಡಲ್ಲ. ಯಾರೂ ಈ ರೀತಿ ಟಾರ್ಗೆಟ್ ಮಾಡಬಾರದು ಎಂದು ಹೇಳಿದ್ದರು.

 

ಯಾವುದೇ ಗ್ಯಾಂಗ್ ಅಥವಾ ಗ್ಯಾಂಗ್ ವಾರ್‌ಗೆ ಅವಕಾಶ ನೀಡುವುದಿಲ್ಲ. ಇನ್ಮುಂದೆ ಈ ರೀತಿಯ ಘಟನೆಗಳು ಸಂಭವಿಸಲು ನಾವು ಬಿಡುವುದಿಲ್ಲ. (ಲಾರೆನ್ಸ್) ಬಿಷ್ಣೋಯ್ (Lawrence Bishnoi) ಗ್ಯಾಂಗ್‌ ನನ್ನು ಮುಗಿಸುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಘಟನೆ ನಡೆದ ದಿನವೇ ನಟನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಮುಂಬೈ ಪೊಲೀಸ್ ಕಮಿಷನರ್ ಜೊತೆಯೂ ಮಾತನಾಡಿದ್ದು, ನಟನ ಭದ್ರತೆ ಹೆಚ್ಚಿಸುವಂತೆ ಸೂಚಿಸಿದ್ದರು.

Share This Article