ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್ 2’ (Jailer 2) ಚಿತ್ರದ ಶೂಟಿಂಗ್ ಇಂದಿನಿಂದ (ಮಾ.10) ಆರಂಭವಾಗಿದೆ. ಈ ಸಿನಿಮಾದ ಶೂಟಿಂಗ್‌ಗೆ ತಲೈವಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಈಗಲೂ ರಶ್ಮಿಕಾ ಕರ್ನಾಟಕದ ಪರ ಇದ್ದೀನಿ ಅಂದ್ರೆ ನಾನು ತುಟಿ ಬಿಚ್ಚಲ್ಲ: ಶಾಸಕ ರವಿ ಗಣಿಗ ಕಿಡಿ
ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಕುರಿತು ಸ್ವತಃ ಚಿತ್ರದ ನಿರ್ಮಾಣ ಸಂಸ್ಥೆ ಅಪ್‌ಡೇಟ್ ಹಂಚಿಕೊಂಡಿದೆ. ಶೂಟಿಂಗ್‌ನಲ್ಲಿ ತಲೈವಾ ಕೂಡ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. 14 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಚಿತ್ರದ ಪ್ರಮುಖ ದೃಶ್ಯ ಶೂಟಿಂಗ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
View this post on Instagram
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ‘ಜೈಲರ್’ ಸಿನಿಮಾ 2022ರಲ್ಲಿ ಮೂಡಿ ಬಂದಿತ್ತು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರ ಪಾರ್ಟ್ 2ಗೆ ಇಂದು ಚಾಲನೆ ಸಿಕ್ಕಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
‘ಜೈಲರ್ ಪಾರ್ಟ್ 1’ರಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ಶಿವಣ್ಣ ನಟಿಸಿದ್ದರು. ಭಾಗ 2ರಲ್ಲೂ ಇವರೆಲ್ಲಾ ನಟಿಸಲಿದ್ದಾರೆ ಎನ್ನಲಾಗಿದೆ.