ಶೂಟಿಂಗ್ ನಲ್ಲಿ ಅಪಘಾತ: ನಟ ವಿಷ್ಣು ಮಂಚುಗೆ ಗಂಭೀರ ಗಾಯ

Public TV
2 Min Read
vishnu manchu 2

ಡ್ರೋನ್ (Drone) ಬಡಿದ ಪರಿಣಾಮ ನಟ ವಿಷ್ಣು ಮಂಚುಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ನ್ಯೂಜಿಲ್ಯಾಂಡ್ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಸಾಹಸ ಸನ್ನಿವೇಶದಲ್ಲಿ ಈ  ಅವಘಡ ಸಂಭವಿಸಿದ್ದು, ತೀವ್ರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

vishnu manchu 3

ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರಕ್ಕೆ ನ್ಯೂಜಿಲ್ಯಾಂಡ್‍ (New Zealand) ನಲ್ಲಿ ಚಿತ್ರೀಕರಣ (Shooting) ಪ್ರಾರಂಭವಾಗಿತ್ತು. ಈ ಚಿತ್ರವು ವಿಷ್ಣು ಮಂಚು (Vishnu Manchu) ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದರು.

vishnu manchu 1

ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಶುರುವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ.

Kannappa 1

ಕಳೆದ ಎಂಟು ತಿಂಗಳುಗಳು ಮರೆಯಲಾರದ ಅನುಭವ ಎನ್ನುವ ವಿಷ್ಣು, ಕಣ್ಣಪ್ಪ ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೇ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ಕಣ್ಣಪ್ಪ ಶೂಟಿಂಗ್ ಆಗುತ್ತಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲ್ಯಾಂಡ್‍ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್‍ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ ಎಂದಿದ್ದರು.

 

ಕಣ್ಣಪ್ಪ ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ವಿಷ್ಣು ಮನವಿ ಮಾಡಿಕೊಂಡಿದ್ದರು ವಿಷ್ಣು.

Web Stories

Share This Article