– ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್
ಹುಬ್ಬಳ್ಳಿ: ರೌಡಿ ಶೀಟರ್ ಅಫ್ತಾಬ್ ಕರಡಿಗುಡ್ಡ ಮೇಲೆ ಕಸಬಾಪೇಟೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ (Hubballi) ರೌಡಿಗಳ ಗ್ಯಾಂಗ್ ವಾರ್ ನಡೆದಿತ್ತು. ರೌಡಿಗಳಾದ ಜಾವೂರ್ ಬೇಫಾರಿ, ಅಪ್ತಾಭ್ ಗ್ಯಾಂಗ್ ನಡುವೆ ವಾರ್ ನಡೆದಿದ್ದು, ಹಳೇ ದ್ವೇಷದ ಹಿನ್ನಲೆ ಜಾವೂರ್ ಮೇಲೆ ಅಪ್ತಾಭ್ ಅಟ್ಯಾಕ್ ಮಾಡಿದ್ದ. ಕೊಲೆ ಮಾಡಲು ಯತ್ನಿಸಿ ಪರಾರಿಯಾಗಲು ಯತ್ನ ಮಾಡಿದ್ದಾನೆ. ಈ ವೇಳೆ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಕಸಬಾಪೇಟೆ ಪೊಲೀಸರು ಅಪ್ತಾಭ್ ಕಾಲಿಗೆ ಗುಂಡು ಹೊಡೆದಿದ್ದರು. ಇದನ್ನೂ ಓದಿ: ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ
ಗುಂಡುಹೊಡೆದ ನಂತರ ಹುಧಾ ಪೊಲೀಸ್ ಕಮೀಷನರ್ ಶಶಿಕುಮಾರ್ (Police Commisioner N Shashikumar) ಆರೋಪಿ ಮನೆಗೆ ಭೇಟಿ ನೀಡಿದ್ದರು. ಆರೋಪಿ ತಂದೆ ಮಹಮ್ಮದ್ ಗೌಸ್‌ನ್ನು ಜೊತೆ ಮಾತನಾಡಿದ್ದರು. ಇದನ್ನೂ ಓದಿ: ಇನ್ನು ಮುಂದೆ ಜಪಾನ್‌ಗೆ ಭಾರತದಿಂದ ಹಸಿರು ಅಮೋನಿಯಾ ರಫ್ತು
ಮಕ್ಕಳಿಬ್ಬರು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದಕ್ಕೆ ತಂದೆ ಕಣ್ಣೀರು ಹಾಕಿದ್ದಾರೆ. ಮಕ್ಕಳಿಂದ ಮರ್ಯಾದೆ ಹೋಗಿದೆ. ಅವರನ್ನು ಗುಂಡು ಹೊಡೆದು ಸಾಯಿಸಿ ಬಿಡಿ ಎಂದು ಕಮೀಷನರ್ ಮುಂದೆ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು. ಮಕ್ಕಳಿಗೆ ಬುದ್ಧಿ ಹೇಳಿ, ಇಲ್ಲದಿದ್ದರೆ ನಾವೇ ಹೇಳುತ್ತೇವೆ ಎಂದು ಕಮೀಷನರ್ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 1ಕ್ಕೆ ಸಿಇಟಿ, ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ