ವೇಣುಗೋಪಾಲ್ ಬಫೂನ್, ಸಿದ್ದರಾಮಯ್ಯ ಅಹಂಕಾರಿ ಎಂದ ಬೇಗ್‍ಗೆ ಶೋಕಾಸ್ ನೋಟಿಸ್

Public TV
2 Min Read
roashan

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಹೇಳಿಕೆ ಕೊಟ್ಟಿದ್ದ ಕಾಂಗ್ರೆಸ್ ಶಾಸಕ ರೋಷನ್ ಬೇಗ್‍ಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಇತ್ತೀಚೆಗಷ್ಟೆ ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ. ಒಂದು ವೇಳೆ ನಾಯಕರಲ್ಲಿ ಅಶಿಸ್ತು ಕಂಡು ಬಂದರೆ ಕಠಿಣ ಕ್ರಮ ಕೆಗೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೆ ರೋಷನ್ ಬೇಗ್ ಬಹಿರಂಗವಾಗಿಯೇ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರೋಷನ್ ಬೇಗ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಕಾಂಗ್ರೆಸ್ ಈ ರೀತಿಯ ಕ್ರಮವನ್ನು ಕೈಗಳ್ಳಲಾಗಿದೆ.

siddu baig

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಕೆಪಿಸಿಸಿ ವತಿಯಿಂದ ಮಾನ್ಯ ರೋಷನ್ ಬೇಗ ಅವರಿಗೆ, ಅವರ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಾಯಕರುಗಳಿಗೆ ಮುಜುಗರ ತರುವಂತಹ ಹೇಳಿಕೆಗಳಿಗೆ ಕಾರಣಿ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ” ಎಂದು ತಿಳಿಸಿದೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಷನ್ ಬೇಗ್ ಸಿದ್ದರಾಮಯ್ಯ ಅಹಂಕಾರಿ, ದಿನೇಶ್ ಗುಂಡೂರಾವ್ ಫ್ಲಾಪ್ ಸ್ಟಾರ್, ಕೆಸಿ ವೇಣುಗೋಪಾಲ್ ಬಫೂನ್ ಎಂದು ಹೇಳಿಕೆ ನೀಡಿದ್ದರು.

ಲೋಕಸಭೆಯಲ್ಲಿ ನಮಗೆ ಹಿನ್ನಡೆಯಾದರೆ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ರೋಷನ್ ಬೇಗ್ ಅಸಮಾಧಾನವನ್ನು ಹೊರ ಹಾಕಿದ್ದರು.

Dinesh Gundu Rao 1

ಸಿಎಲ್‍ಪಿ ನಾಯಕರು ನಡೆದುಕೊಂಡ ರೀತಿ, ಅಹಂಕಾರ, ದುರಾಹಂಕಾರ ಸರಿಯಲ್ಲ. ಕುಮಾರಸ್ವಾಮಿ, ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನಾವು ನಿಮ್ಮ ಜೊತೆಗೆ ಸರ್ಕಾರ ಮಾಡೋಣ ಎಂದು ಹೇಳಿ, ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದ್ದು ಎಲ್ಲರಿಗೂ ಇಷ್ಟ ಆಗಿಲ್ಲ. ನಿಮ್ಮ ನಡತೆ ನೋಡಿ ಜನರಿಗೆ ಗೊಂದಲ ಹಾಗೂ ಬೇಜಾರಾಗಿದೆ ಎಂದು ದೂರಿದ್ದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಬೇರೆ ಕಾರಣ ಇದೆ. ನಮ್ಮ ಅಧ್ಯಕ್ಷರ ವಿರುದ್ಧ ನನಗೆ ಬೇಜಾರಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರಲು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಸೇರುವ ಬಗ್ಗೆ ಬಗ್ಗೆ ಯೋಚನೆ ಮಾಡಿಲ್ಲ. ಅದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇನೆ. ಇದು ಕಾಂಗ್ರೆಸ್ ಪಾರ್ಟಿ ಇದು ಸಿದ್ದರಾಮಯ್ಯ ಪಾರ್ಟಿ. ಸಿದ್ದರಾಮಯ್ಯ ಒಡೆದು ಆಳೋ ನೀತಿ ಮಾಡುತ್ತಿದ್ದಾರೆ. ಬಹಳ ದೊಡ್ಡ ಸಮುದಾಯ ಒಡೆದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಳಿಯುತ್ತಿದೆ. ಇದು ಸಿದ್ದರಾಮಯ್ಯ ಕುತಂತ್ರವಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನು ಮತಬ್ಯಾಂಕಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಎಲೆಕ್ಷನ್ ನಲ್ಲಿ ಮುಸ್ಲಿಮರನ್ನು ಕ್ಯಾರೆ ಅನ್ನಲಿಲ್ಲ. ದಿನೇಶ್ ಗುಂಡೂರಾವ್‍ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಸವಾಲೆಸೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *