ಬ್ಯಾಂಕಾಕ್: ಸೊಂಟದ ಗಾಯದಿಂದ (Hip Injury) ದೇಹ ದಣಿವಾಗಿತ್ತು, ಬಿಸಲಿನ ತಾಪಕ್ಕೆ ಕಾಲಿನ ಬೂಟು ಕರಗಿಹೋಗಿತ್ತು. ಆದರೂ ಉತ್ಸಾಹ ಕುಗ್ಗಲಿಲ್ಲ, ವಯಸ್ಸು ದೇಹಕ್ಕೆ ಆಗಿದೆಯೇ ಹೊರತು ಮನಸ್ಸಿಗಲ್ಲ, ಉತ್ಸಾಹ ಬಿಡದ ಛಲಕ್ಕೆ ವಯಸ್ಸು ಅಡ್ಡ ಬರುವುದಿಲ್ಲ ಎಂಬುದನ್ನ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು (Thailand Women) ತೋರಿಸಿಕೊಟ್ಟಿದ್ದಾರೆ.
Advertisement
ಹೌದು. 52 ವರ್ಷ ವಯಸ್ಸಿನ ಮಹಿಳೆ ನಟಾಲಿ ಡೌ ಅಲ್ಟ್ರಾಮ್ಯಾರಥಾನ್‌ನಲ್ಲಿ (Ultramarathon) 12 ದಿನಗಳಲ್ಲಿ ಬರೋಬ್ಬರಿ 1,000 ಕಿಮೀ ಓಟ ಪೂರೈಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಥಾಯ್‌ಲ್ಯಾಂಡ್‌ನಿಂದ ಆರಂಭಗೊಂಡ ಮ್ಯಾರಥಾನ್ ಮಲೇಷ್ಯಾ ಮತ್ತು ಸಿಂಗಾಪುರ ಸೇರಿ ಒಟ್ಟು 12 ದಿನಗಳಲ್ಲಿ 1,000 ಸಾವಿರ ಕಿಮೀ ಓಡಿ ಸಾಧನೆ ಮಾಡಿದ್ದಾರೆ.
Advertisement
ಸೊಂಟದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನಟಾಲಿ ಡೌ ಬಿಸಿಲಿನ ತಾಪಕ್ಕೂ ಜಗ್ಗದೇ ಅಲ್ಟ್ರಾ ಮ್ಯಾರಥಾನ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇದೀಗ ಗಿನ್ನಿಸ್ ರೆಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್
Advertisement
Advertisement
ಡೌ ಅವರ ಮ್ಯಾರಥಾನ್ ಓಟವು ಸುಲಭವಾಗಿರಲಿಲ್ಲ. ಓಟದ ಪ್ರದೇಶದಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪ ಇತ್ತು. ತಾಪಮಾನ ಹೆಚ್ಚಳಕ್ಕೆ ಆಕೆಯ ಬೂಟುಗಳು ಕರಗಿದ್ದವು. ಅಲ್ಲದೇ ಮ್ಯಾರಥಾನ್ ಆರಂಭಿಸಿದ ಮೊದಲ ದಿನವೇ ಸೊಂಟದ ಗಾಯದ ಸಮಸ್ಯೆಗೆ ತುತ್ತಾಗಿದ್ದಳು, ಇದ್ಯಾವುದನ್ನೂ ಲೆಕ್ಕಿಸದೇ ಚಿರ ಯುವತಿಯಂತೆ ಓಟ ಮುಂದುವರಿಸಿದ ಡೌ ಪ್ರತಿದಿನ 84 ಕಿಮೀ ಓಟದ ಮೂಲಕ 12 ದಿನಗಳಲ್ಲಿ 1,000 ಕಿಮೀ ಪೂರೈಸಿದ್ದಾರೆ. ಮಹಿಳೆಯ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು