ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಶಾಂಕಿಂಗ್ ನ್ಯೂಸ್ ಕುಡಿಯುವ ನೀರಿನಲ್ಲಿ ಜೀವವನ್ನೇ ಕೊಲ್ಲುವ ವಿಷಕಾರಿ ಅಂಶವಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು..ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯ ನೀರು ಸಂಪೂರ್ಣ ವಿಷವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ ಎಪ್ಪತ್ತು ಬೋರ್ ವೆಲ್‍ಗಳನ್ನು ಈಗ ಸೀಝ್ ಮಾಡಿ ಜನರಿಗೆ ಈ ನೀರು ಕುಡಿಯದಂತೆ ಆದೇಶಿಸಿದೆ.
Advertisement
Advertisement
ಕುಡಿಯುವುದಕ್ಕೆ ಮಾತ್ರವಲ್ಲ, ಕೈಗಾರಿಕೆ ಉದ್ದೇಶ, ಗಾರ್ಡನಿಂಗ್ ಗೂ ಕೂಡ ಈ ನೀರು ಬಳಸುವಂತಿಲ್ಲ. ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗಿರುವ ಕ್ರೋಮಿಯಂ, ಪ್ಲೋರೈಡ್ ಸೇರಿದಂತೆ ಮನುಷ್ಯನ ದೇಹಕ್ಕೆ ಮಾರಣಾಂತಿಕ ಕಾಯಿಲೆ ತರುವ ವಿಷ ಇಲ್ಲಿನ ನೀರಿನಲ್ಲಿ ಸೇರಿಕೊಂಡಿದ್ದು, ಜನ ಭೀತಿಗೊಂಡಿದ್ದಾರೆ.
Advertisement
ಭೂಮಿಯ ಅಂತರ್ಜಲ ಎಷ್ಟು ವಿಷವಾಗಿದೆಯಂದರೆ ಶುದ್ಧೀಕರಣ ಮಾಡಿದರು ಈ ನೀರು ಬಳಕೆಗೆ ಯೋಗ್ಯವಲ್ಲ ಅಂತ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯ ಪಟ್ಟಿದೆ. ಜಲಮಂಡಳಿಗೆ ಹೆಚ್ಚುವರಿ ಕಾವೇರಿ ನೀರನ್ನು ಪೀಣ್ಯ ಇಂಡಸ್ಟ್ರಿ ಏರಿಯಾಗೆ ಸರಬರಾಜು ಮಾಡುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.
Advertisement
ಅತಿಯಾದ ಕೈಗಾರಿಕೆಗಳು, ಕೈಗಾರಿಕೆ ಬಳಕೆ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ಇರೋದು ಈ ದುರಂತಕ್ಕೆ ಕಾರಣವಾಗಿದೆ. ಸದ್ಯಕ್ಕೆ ಮುಂದೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv