Bengaluru CityCrimeDistrictsKarnatakaLatest

ಪೆಪ್ಪರ್ ಸ್ಪ್ರೇನಿಂದ ಪಾರಾದ ಯುವತಿ ಪ್ರಕರಣ- ವಿಚಾರಣೆ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಪೆಪ್ಪರ್ ಸ್ಪ್ರೇಯಿಂದ ಯುವತಿ ಪಾರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಆಘಾತಕಾರಿ ಮಾಹಿತಿ ಹೊರಬಂದಿದೆ. ಹೈಫೈ ಹುಡುಗ ಅಂತಾ ಲವ್ ಮಾಡಿದ್ದ ಹುಡುಗಿ, ತನ್ನ ಪ್ರೇಮಿ ಕಾರ್ಪೆಂಟರ್ ಅಂತಾ ಗೊತ್ತಾದ ತಕ್ಷಣ ಮೂರು ವರ್ಷದ ಪ್ರೀತಿಯನ್ನು ಬ್ರೇಕಪ್ ಮಾಡಿಕೊಂಡಿದ್ದಾಳೆ.

ಕಳೆದ 21ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಬರುತ್ತಿದ್ದ ಯುವತಿಯನ್ನು, ಅಡ್ಡಹಾಕಿದ ನಾಲ್ವರು ಯುವಕರ ತಂಡ ಆಕೆಯನ್ನು ಕಿಡ್ನ್ಯಾಪ್ ಮಾಡಿದರು. ಕಿಡ್ನ್ಯಾಪ್ ಮಾಡಿದ ಯುವಕರ ತಂಡ ನೈಸ್ ರೋಡ್‍ನ ಅದೊಂದು ಜಾಗದಲ್ಲಿ ಕಾರು ನಿಲ್ಲಿಸಿದರು. ಈ ವೇಳೆ ಕಾರಿನಲ್ಲಿದ್ದ ಸಚಿನ್ ಎನ್ನುವ ಯುವಕ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಮುಖಕ್ಕೆ ಪೆಪ್ಪರ್ ಸ್ಪ್ರೈ ಹೊಡೆದಿದ್ದ. ಸಚಿನ್ ಹೊಡೆದ ಪೆಪ್ಪರ್ ಸ್ಪ್ರೈಗೆ ಸ್ವತಃ ಯುವಕ ಕೂಡ ಅಸ್ವಸ್ಥನಾಗಿ ಕಾರಿನಿಂದ ಹೊರಬಿದ್ದಿದ್ದ. ಆ ತಕ್ಷಣ ಕಾರಿನಿಂದ ಹೊರಬಂದ ಯುವತಿ, ರಸ್ತೆಯಲ್ಲಿ ಬರುತ್ತಿದ್ದ ಆಟೋ ಡ್ರೈವರ್ ಸಹಾಯದಿಂದ ಮನೆ ಸೇರಿದ್ದಳು. ಇದನ್ನೂ ಓದಿ: ರಕ್ಷಿಸು ಅಂದ್ರೆ ನಾನೇ ಕಿಡ್ನಾಪ್ ಮಾಡಿಸಿದ್ದು ಅಂದ- ಪೆಪ್ಪರ್ ಸ್ಪ್ರೇ ಉಳಿಸಿತು ಯುವತಿ ಪ್ರಾಣ

pepper spray 2

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿ ಸಚಿನ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹೊಸದೊಂದು ಕಥೆ ಹುಟ್ಟಿಕೊಂಡಿದೆ. ಸದ್ಯ ಕಿಡ್ನ್ಯಾಪ್ ಆಗಿದ್ದ ಯುವತಿ ಮತ್ತು ಸಚಿನ್ ಮೂರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹುಡುಗ ಒಳ್ಳೆ ಹಣವಂತ ಅಂತಾ ತಿಳಿದುಕೊಂಡಿದ್ದ ಯುವತಿಗೆ ತನ್ನ ಹುಡುಗ ಕಾರ್ಪೆಂಟರ್ ಅಂತಾ ತಿಳಿದು ನೆಗ್ಲೆಕ್ಟ್ ಮಾಡುವುದ್ದಕ್ಕೆ ಶುರು ಮಾಡಿದ್ದಳು. ಇದರಿಂದ ನೊಂದ ಪ್ರೇಮಿ ಏನಾದರೂ ಮಾಡಿ ಯುವತಿಯನ್ನು ಪಡೆಯಲೇಬೇಕು ಅಂತಾ ಕಿಡ್ನ್ಯಾಪ್ ಮಾಡಿ ಮದುವೆ ಆಗುವಂತೆ ಒತ್ತಾಯಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕು ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ಯುವತಿಯ ವಿಚಾರಣೆ ನಂತರವಷ್ಟೇ ಅಸಲಿ ವಿಚಾರ ತಿಳಿಯಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *