ಬೆಂಗಳೂರು: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇನ್ನು ಮುಂದೆ ಪೆಟ್ರೋಲ್-ಡಿಸೇಲ್ ಗಾಡಿಗೆ ಹಾಕ್ಕೋಳೋದು ಕಷ್ಟವಾಗಲಿದೆ.
ಹೌದು. ನಗರದ ಮಾಲಿನ್ಯ ಪ್ರಮಾಣ ತಗ್ಗಿಸಲು ಕೇಂದ್ರ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಮಂಡಳಿಯಿಂದ ಹೊಸ ಕಾಯ್ದೆಯೊಂದು ಜಾರಿ ಮಾಡಿದೆ. ಹೊಗೆಯುಗುಳುವ ಗಾಡಿ ನಿಮ್ಮದಾಗಿದ್ರೆ ಬಂಕ್‍ಗಳಲ್ಲಿ ಪೆಟ್ರೋಲ್-ಡೀಸೆಲ್ ಸಿಗಲ್ಲ. ಹೀಗಾಗಿ ಎಮಿಷನ್ ಟೆಸ್ಟ್ ಪ್ರತಿ ಕೊಟ್ರಷ್ಟೇ ಪೆಟ್ರೋಲ್- ಡಿಸೇಲ್ ಸಿಗುತ್ತದೆ ಅಂತ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
Advertisement
ನಿಮ್ಮ ಗಾಡಿ ಹೊಗೆಯುಗುಳಲ್ಲ ಅಂತಾ ಎಮಿಷನ್ ಟೆಸ್ಟ್ ಪ್ರತಿಯನ್ನು ಕೊಡಬೇಕು. ಬಂಕ್ ಹಾಗೂ ವಾಹನ ಸವಾರರಿಗೆ ಈ ಸುತ್ತೋಲೆಯನ್ನು ಸರ್ಕಾರ ಶೀಘ್ರದಲ್ಲಿಯೇ ಹೊರಡಿಸಲಿದೆ. ಈ ಕುರಿತು ಈಗಾಗಲೇ ಸಾರಿಗೆ ಇಲಾಖೆ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚೆ ಮಾಡಿದ್ದಾರೆ.
Advertisement
ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಪೆಟ್ರೋಲ್ ಬಂಕ್‍ಗಳ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಅಲ್ಲದೇ ವಾಹನದ ಮಾಲಿನ್ಯ ಪ್ರಮಾಣ ಟೆಸ್ಟ್ ಮಾಡಿಸದ ವಾಹನಗಳ ಮೇಲೆ ದಂಡ ಪ್ರಯೋಗಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿ ಸಜ್ಜಾಗಿದೆ ಎಂದು ಹೇಳಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv