ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಲು ಪ್ಲಾನ್ ಮಾಡುವವರಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿದೆ. ಹೌದು. ಹಬ್ಬದ ನೆಪದಲ್ಲಿ ಖಾಸಗಿ ಬಸ್‍ಗಳ ಮಾಲೀಕರಿಂದ ಹಗಲು ದರೋಡೆ ನಡೆಯುತ್ತಿದೆ.
ಎಂದಿಗಿಂತ ಎರಡ್ಮೂರು ಪಟ್ಟು ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರಿಂದ ಸುಲಿಗೆ ಮಾಡಲು ಮಾಲೀಕರ ತಯಾರಾಗಿದ್ದು, ಗಣೇಶ ಚತುರ್ಥಿ ಮುನ್ನಾ ಎರಡು ದಿನದ ರೇಟ್ ಕೇಳಿದ್ರೆ ಆಗ್ತಿರಾ ಶಾಕ್ ಆಗ್ತೀರಿ. ಇಂದು 500 ರೂ. ಟಿಕೆಟ್ ದರ ಇದ್ರೆ 11, 12ರಂದು 1500 ರೂ. ಆಗಿರುತ್ತದೆ. ಈ ಬಗ್ಗೆ ಪ್ರಶ್ನಿಸಿದ್ರೆ ಬೇಕಾದ್ರೆ ಬುಕ್ ಮಾಡಿ ಇಲ್ಲಾ ಅಂದ್ರೆ ಹೋಗಿ ಅಂತ ಬುಕ್ಕಿಂಗ್ ಏಜೆಂಟ್ಸ್ ಹೇಳುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೇಕ್‍ನಲ್ಲಿ ಬಯಲಾಗಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ
Advertisement
Advertisement
ಬೆಂಗಳೂರಿನಿಂದ ಬೇರೆ ಬೇರೆ ಪ್ರಮುಖ ಊರುಗಳಿಗೆ ಇವತ್ತಿನ ಪ್ರಯಾಣ ದರ ಎಷ್ಟಿದೆ. 11, 12 ನೇ ತಾರೀಕು ಇದೇ ಪ್ರಮುಖ ಊರುಗಳಿಗೆ ಟಿಕೆಟ್ ದರ ಈ ಕೆಳಗಿನಂತಿದೆ. ಇದನ್ನೂ ಓದಿ: ಮತ್ತೊಂದು ಶಾಕ್, ಇನ್ನು ಮುಂದೆ ಪ್ರತಿ ತಿಂಗಳು ಬಸ್ ಟಿಕೆಟ್ ಪರಿಷ್ಕರಣೆ!
Advertisement
ಎಲ್ಲಿಂದ ಎಲ್ಲಿಗೆ [ನಾನ್ ಎಸಿ ಸ್ಲೀಪರ್] – ಇಂದಿನ ದರ- 11, 12ರ ದರ
ಬೆಂಗಳೂರು TO ಬೆಳಗಾವಿ – 950 ರೂ. – 1750 ರೂ.
ಬೆಂಗಳೂರು TO ಮಂಗಳೂರು – 850- ರೂ.- 1600 ರೂ .
ಬೆಂಗಳೂರು TO ಉಡುಪಿ – 850 ರೂ. – 1500 ರೂ .
ಬೆಂಗಳೂರು TO ಶಿವಮೊಗ್ಗ – 560 ರೂ. – 1600 ರೂ.
ಬೆಂಗಳೂರು TO ಹುಬ್ಬಳ್ಳಿ – 600 ರೂ. – 1700 ರೂ.
ಬೆಂಗಳೂರು TO ಬೀದರ್ – 1100 ರೂ. – 1700 ರೂ.
ಬೆಂಗಳೂರು TO ಬಳ್ಳಾರಿ – 560 ರೂ. – 1300 ರೂ.
ಬೆಂಗಳೂರು TO ರಾಯಚೂರು – 660 ರೂ. – 1700 ರೂ.
ಬೆಂಗಳೂರು TO ಮೈಸೂರು – 500 ರೂ. – 850 ರೂ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv