ಬೆಂಗಳೂರು: ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದ್ದು ಇದಕ್ಕಾಗಿ ಮರಗಳ ಮಾರಣಹೋಮವಾಗುವ ಚಿಂತೆ ತಲೆದೂರಿದೆ.
ಬೆಂಗಳೂರು ನಿತ್ಯ ಬೆಳೆಯುತ್ತಿದ್ದು, ಇದರ ಜೊತರೆ ಜೊತೆಗೆ ಟ್ರಾಫಿಕ್ ಕಿರಿಕಿರಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ನಗರದಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ಚಿಂತಿಸಿದೆ. ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೋರೆಷನ್ ಲಿಮಿಡೆಟ್ ವತಿಯಿಂದ 11 ಕಡೆ ಎಲಿವೆಟೆಡ್ ಕಾರಿಡಾರ್ ಮಾಡಲು ಚಿಂತಿಸಿದೆ. ಈ ಸಂಬಂಧ ಮರಗಳ ಕಡಿಯುವ, ಬೇರೆಡೆಗೆ ಸ್ಥಳಾಂತರಿಸುವ ಸಂಬಂಧ ವರದಿ ನೀಡುವಂತೆ ಅರಣ್ಯ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಈ ಪ್ರಕಾರ 3,700 ಮರಗಳ ಬಗ್ಗೆ ಪಾಲಿಕೆ ಅಧ್ಯಯನ ಶುರು ಮಾಡಿದೆ ಎಂದು ಬಿಬಿಎಂಪಿ ಉಪ ಅರಣ್ಯಾಧಿಕಾರಿ ಚೋಳರಾಜನ್ ತಿಳಿಸಿದ್ದಾರೆ.
ಹೆಬ್ಬಾಳ, ಕಂಟೋಮ್ಮೆಟ್ ಸ್ಟೇಷನ್, ಆಡುಗೋಡಿ, ಸೆಂಟ್ ಜಾನ್ ಸರ್ಕಲ್, ಬೆಟ್ಟರಾಹಳ್ಳಿ, ಮೇಖ್ರಿ ಸರ್ಕಲ್, ವಿಠಲ್ ಮಲ್ಯ ರೋಡ್, ಮಿನರ್ವ ಸರ್ಕಲ್, ಹೆಚ್‍ಎಎಲ್ ರಸ್ತೆ ಮತ್ತು ಮಾರತಹಳ್ಳಿ ಜಂಕ್ಷನ್ ಬಳಿ ಸರ್ವೆ ನಡೆಯುತ್ತಿದೆ. ಈ ಬೆಳವಣಿಗೆ ಪರಿಸರ ಪ್ರೇಮಿಗಳಿಗೂ ಬೇಸರ ತಂದಿದೆ ಎಂದು ಪರಿಸರ ಪ್ರೇಮಿ ಅಮರೇಶ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿತ್ತು. ಆದರೆ ಈಗ ನಗರದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಎಸಿಯಿಲ್ಲದೇ ಕಚೇರಿ ನಡೆಯೋದೇ ಇಲ್ಲ ಅನ್ನುವಂತಾಗಿದೆ. ಹಾಗಾಗಿ ಅಭಿವೃದ್ಧಿಯ ಜೊತೆಗೆ ಮರಗಳನ್ನು ಉಳಿಸುವ ಪ್ರಯತ್ನವಾಗಲಿ ಎಂಬುದು ಪರಿಸರ ಪ್ರೇಮಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv