ಮೈಸೂರು: ಕಾರು ಅಪಘಾತ ಪ್ರಕರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ಶಾಕಿಂಗ್ ನ್ಯೂಸ್ ದೊರೆತಿದೆ.
ಕಾರು ಅಪಘಾತದಲ್ಲಿ ಬಲಗೈ ಮೂಳೆ ಮುರಿದುಕೊಂಡಿರುವ ದರ್ಶನ್ ಅವರು ಇನ್ನೊಂದು ವರ್ಷ ಜಿಮ್ ಮಾಡುವಂತಿಲ್ಲ. ಅಲ್ಲದೇ ನಾಲ್ಕು ವಾರ ಕಡ್ಡಾಯವಾಗಿ ತೋಳಿನಪಟ್ಟಿ ಹಾಕಲೇಬೇಕು. ಅಲ್ಲದೇ ಎಂಟು ವಾರ ಅವರು ವಿಶ್ರಾಂತಿಯಲ್ಲಿ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
Advertisement
Advertisement
ಮೂಳೆ ಮುರಿತದ ಕಾರಣ ದರ್ಶನ್ ಬಲಗೈಗೆ ಪ್ಲೇಟ್ ಅಳವಡಿಸಲಾಗಿದೆ. ಪ್ಲೇಟ್ ತೆಗೆಯಲು ಎರಡು ವರ್ಷ ಅವಧಿ ಬೇಕು. ಅಲ್ಲಿಯವರೆಗೂ ದರ್ಶನ್ ಭಾರ ಎತ್ತುವಂತಿಲ್ಲ. ಸದ್ಯಕ್ಕಂತು ಜಿಮ್ ಮಾಡುವಂತಿಲ್ಲ. ಅಪಘಾತದಿಂದ ಸುಧಾರಿಸಲು ಒಂದು ವರ್ಷ ಜಿಮ್ ಮಾಡುಬಾರದು ಎಂದು ವೈದ್ಯರು ದರ್ಶನ್ ಗೆ ಸಲಹೆ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
Advertisement
Advertisement
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ಈಗ ಶನಿವಾರ ದರ್ಶನ್ ಡಿಸ್ಚಾರ್ಜ್ ಆಗಬಹುದು ಎಂದು ಆಸ್ಪತ್ರೆಯ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಬುಧವಾರ ಸಂಜೆ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಗಾಯಗಳ ಊತ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಸದ್ಯ ದರ್ಶನ್ ಅವರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಚಿತ್ರರಂಗದ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv