ಬೆಂಗಳೂರು: ಎಲೆಕ್ಷನ್ ಹವಾ ದೇಶಾದ್ಯಂತ ಧೂಳೆಬ್ಬಿಸಿದೆ. ಅತ್ತ ಚುನಾವಣಾ ಆಯೋಗ ಎಣ್ಣೆ ಕಿಕ್ ಇಳಿಸಲು ಮೇಜರ್ ಸರ್ಜರಿ ಮಾಡಿದೆ. ಚುನಾವಣೆ ಮುಗಿಯೋವರೆಗೆ ಎಣ್ಣೆ ಬೇಕು ಅಣ್ಣಾ ಎಂದು ಕೆಮ್ಮಂಗಿಲ್ಲ. ಬಾರ್ ಮಾಲೀಕರನ್ನು ಗಿರ ಗಿರ ಸುತ್ತಿಸೋ, ಎಣ್ಣೆ ಪ್ರಿಯರ ನಶೆ ಇಳಿಸೋ ಸುದ್ದಿ ಇಲ್ಲಿದೆ.
ಈ ಎಲೆಕ್ಷನ್ ಟೈಂನಲ್ಲಿ ಎಣ್ಣೆ ಕೊಟ್ಟೇ ವೋಟು ಹಾಕಿಸಿಕೊಳ್ಳುವ ಜನಪ್ರತಿನಿಧಿಗಳು ಇರುವುದರಿಂದ ಚುನಾವಣಾ ಆಯೋಗ ಎಣ್ಣೆ ವ್ಯಾಪಾರಕ್ಕೆ ಭರ್ಜರಿ ಕತ್ತರಿ ಹಾಕಿದೆ. ಡೈಲಿ ಬಾರ್ ಗಳಿಗೆ ನೂರೆಂಟು ರೂಲ್ಸ್ ತಂದು ಎಣ್ಣೆ ವ್ಯಾಪಾರದ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎಂದು ಹೇಳಲಾಗುತ್ತಿದೆ.
Advertisement
ನನ್ ದುಡ್ಡು ನನ್ನಿಷ್ಟ ಅನ್ಕೊಂಡು ಬಾರ್ ಗೆ ಹೋಗಿ ನಿಮ್ಗೆ ಬೇಕಾದಷ್ಟು ಎಣ್ಣೆ ವ್ಯಾಪಾರ ಮಾಡುವ ಆಗಿಲ್ಲ. ಅಷ್ಟೆ ಅಲ್ಲ ಬಾರ್ ಮಾಲೀಕರಿಗೆ ಈ ಬಾರಿ ಲೋಕಸಭಾ ಎಲೆಕ್ಷನ್‍ಗೆ ಹೊಸ ರೂಲ್ಸ್ ತಂದಿದ್ದಾರೆ.
Advertisement
Advertisement
ಎಣ್ಣೆಗೂ ನೀತಿ ಸಂಹಿತೆ!
* ಬಾರನ್ನು ಬೆಳಗ್ಗೆ 10.30ಕ್ಕೆ ತೆರೆಯಬೇಕು. ರಾತ್ರಿ ನಿಗಧಿತ ಅವಧಿಗೆ ಮುಚ್ಚಬೇಕು. ಬೇಗ ತೆರೆಯೋದು, ಲೇಟಾಗಿ ಮುಚ್ಚೋದು ಮಾಡಿದರೆ ಅಂತಹ ಬಾರ್‍ಗಳ ಮೇಲೆ ದಂಡ ಪ್ರಯೋಗ
* ಪ್ರತಿ ಬಾರ್ ಮೇಲೆ ಕಣ್ಣಿಡಲು ಸ್ಪೆಷಲ್ ಟೀಮ್ ರಚನೆ
* ಒಬ್ಬ ವ್ಯಕ್ತಿ 2.3 ಲೀಟರ್‍ನಷ್ಟು ಮದ್ಯ ಖರೀದಿ ಮಾಡಬಹುದು. ಹೆಚ್ಚು ಖರೀದಿಸಿದರೆ ಬಾರ್‍ಗಳ ಲೈಸೆನ್ಸ್‍ಗೆ ಕುತ್ತು.
* ನಿತ್ಯ ಬೆಳಗ್ಗೆ ಎಂಟು ಗಂಟೆಯೊಳಗೆ ಮದ್ಯ ಮಾರಾಟ, ವ್ಯಾಪಾರದ ಸಂಪೂರ್ಣ ವಿವರ ನೀಡಬೇಕು. ಡೈಲಿ ವ್ಯಾಪಾರದ ದಾಖಲೆಯನ್ನು ಅಬಕಾರಿಗೆ ಕಳಿಸಬೇಕು.
* ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದರೆ ಸ್ಪೆಷಲ್ ವಿಂಗ್ಸ್ ಕೈಯಲ್ಲಿ ತಗ್ಲಾಕ್ಕೊಂಡ್ರೆ ಕ್ರಮ
Advertisement
ಒಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅಬಕಾರಿ ಇಲಾಖೆ ಕೊಂಚ ಕಠಿಣವಾಗಿಯೇ ಕ್ರಮ ಕೈಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv