ಬೆಂಗಳೂರು: ನಗರದ ಅಮ್ಮಂದಿರಿಗೆ ಶಾಕಿಂಗ್ ಸುದ್ದಿ. ತಾಯ್ತನದ ಸಂಭ್ರಮದಲ್ಲಿರುವವರಿಗೆ ಅರಗಿಸಿಕೊಳ್ಳಲಾರದ ಕಹಿಯನ್ನು ವೈದ್ಯಲೋಕ ಹೊರಹಾಕಿದೆ.
ನವಮಾಸ ಕಂದಮ್ಮಗಳು ಗರ್ಭದಲ್ಲಿ ನಿಲ್ಲುತ್ತಿಲ್ಲ, ಗ್ರಾಮೀಣ ಭಾಗಕ್ಕಿಂತ ಸಿಟಿಭಾಗದಲ್ಲಿಯೇ ಅವಧಿಪೂರ್ವ ಹೆರಿಗೆ ಪ್ರಕರಣ ಹೆಚ್ಚಾಗುತ್ತಿದೆ. ಅವಧಿ ಪೂರ್ವ ಹುಟ್ಟಿದ ಮಕ್ಕಳು ಕೇವಲ 600 ರಿಂದ 800 ಗ್ರಾಂ ಇರೋದ್ರಿಂದ ಬದುಕುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಆತ್ಯಾಧುನಿಕ ತಂತ್ರಜ್ಞಾನಗಳು ಇದ್ರೂ ಖರ್ಚುವೆಚ್ಚವನ್ನು ಭರಿಸೋದು ಕಷ್ಟ ಅನ್ನುವಂತಾಗಿದೆ. ಇದನ್ನೂ ಓದಿ: 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!
Advertisement
ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ, ಒತ್ತಡ ಸೇರಿದಂತೆ ಬದಲಾದ ಜೀವನ ಶೈಲಿ ಈ ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ. ಹತ್ತರಲ್ಲಿ ಎರಡರಿಂದ ಮೂರು ಹೆರಿಗೆ ಅವಧಿಪೂರ್ವವೇ ಆಗುತ್ತಿದ್ದು, ವೈದ್ಯಲೋಕಕ್ಕೆ ಕೊಂಚ ಸವಾಲಾಗಿದೆ ಅಂತ ಫೋರ್ಟಿಸ್ ಫೆಮಿನಾ ಆಸ್ಪತ್ರೆ ಮುಖ್ಯಸ್ಥೆ ಡಾ ಪ್ರತಿಮಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.