ಮುಂಬೈ: ವೈದ್ಯಕೀಯ ಲೋಕದಲ್ಲಿ ಅದೆಷ್ಟೋ ವಿಚಿತ್ರ ವಿದ್ಯಮಾನಗಳು ಘಟಿಸಿವೆ. ಹುಟ್ಟುವ ಮಕ್ಕಳು ಕೆಲವೊಮ್ಮ ಅಂಗವಿಕಲವಾಗಿ ಹುಟ್ಟುವುದು, ಇನ್ನೂ ಕೆಲವೊಮ್ಮೆ ಹೆಚ್ಚಿನ ಅಂಗಗಳನ್ನು ಹೊಂದಿ ವಿಸ್ಮಯ ಮೂಡಿಸಿರುವುದೂ ಇದೆ. ಇದೇ ರೀತಿ ಅವಳಿ ಮಕ್ಕಳ ಅಂಗಗಳು ಸೇರಿಕೊಂಡು ಹುಟ್ಟಿ ವೈದ್ಯಕೀಯ ಲೋಕಕ್ಕೆ ಸವಾಲು ಹಾಕಿರುವುದೂ ಇದೆ. ಇಲ್ಲೊಬ್ಬ ವ್ಯಕ್ತಿ ತನ್ನದೇ ಟ್ವಿನ್ಸ್‌ಗೆ (Twins) 36 ವರ್ಷಗಳ ಕಾಲ ಗರ್ಭ ಧರಿಸಿದ್ದ (Pregnant) ಬಲು ಅಪರೂಪದ ಪ್ರಕರಣವನ್ನು ತಡವಾಗಿ ಪತ್ತೆಹಚ್ಚಿದ್ದಾರೆ.
ನಾಗ್ಪುರದ (Nagpur) 60 ವರ್ಷದ ವ್ಯಕ್ತಿಯೊಬ್ಬರು 3 ದಶಕಗಳಿಗೂ ಹೆಚ್ಚು ವರ್ಷಗಳ ಕಾಲ ತನ್ನ ದೊಡ್ಡ ಹೊಟ್ಟೆಯೊಂದಿಗೆ ಬದುಕಿದ್ದು, ಆತನನ್ನು ಗರ್ಭಿಣಿ ಎಂದೇ ಜನರು ಗೇಲಿ ಮಾಡುತ್ತಿದ್ದರು. ದಿ ಡೈಲಿ ಸ್ಟಾರ್ ಪ್ರಕಾರ, ಜೀವನೋಪಾಯಕ್ಕೆ ಕಷ್ಟಪಟ್ಟು ದುಡಿಯುತ್ತಿದ್ದ ಭಗತ್ ತನ್ನ ದೊಡ್ಡ ಹೊಟ್ಟೆಯನ್ನು ನಿರ್ಲಕ್ಷಿಸಿದ್ದ. ಆತನ ಗೆಳೆಯರು, ಕುಟುಂಬಸ್ಥರು ಕೂಡಾ ಆತನ ದೊಡ್ಡ ಹೊಟ್ಟೆಯ ಬಗ್ಗೆ ಹೀಯಾಳಿಸುತ್ತಿದ್ದರು. ಆದರೂ ಎಲ್ಲವನ್ನೂ ಸಹಿಸಿಕೊಂಡು ಆತ ತನ್ನ ದಿನ ದೂಡಿಕೊಂಡಿದ್ದ.
Advertisement
Advertisement
ಆದರೆ ಭಗತ್‌ಗೆ 1999ರಲ್ಲಿ ಹೊಟ್ಟೆಯ ಭಾರೀ ಉಬ್ಬಿನಿಂದಾಗಿ ಉಸಿರಾಡುವುದೇ ಕಷ್ಟವಾಗತೊಡಗಿತು. ಕೊನೆಗೂ ಆತ ಮುಂಬೈನ ಆಸ್ಪತ್ರೆಗೆ ದಾಖಲಾದ. ಆದರೆ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಭಗತ್‌ನ ವೈದ್ಯಕೀಯ ಸ್ಥಿತಿ ಅಪರೂಪದಲ್ಲೇ ಅಪರೂಪವಾಗಿತ್ತು.
Advertisement
ಭಗತ್‌ನನ್ನು ಪರೀಕ್ಷೆಗೆ ಒಳಪಡಿಸಿದ ಡಾ. ಅಜಯ್ ಮೆಹ್ತಾ, ಆರಂಭದಲ್ಲಿ ಆತನ ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಇರುವುದಾಗಿ ಊಹಿಸಿಕೊಂಡರು. ಆತನ ಹೊಟ್ಟೆಯನ್ನು ಸೀಳಿ ತೆರೆದಾಗಿ ಇದೊಂದು ಕ್ಯಾನ್ಸರ್‌ನ ಗಡ್ಡೆ ಎಂದು ಭಾವಿಸಿದರು. ಅದನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಅಲ್ಲಿ ಇನ್ನೊಂದು ಅಪೂರ್ಣ ಮಾನವನೇ ಇರೋದನ್ನು ಕಂಡು ಬೆರಗಾದರು. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು
Advertisement
ಭಗತ್‌ನ ಹೊಟ್ಟೆಯಲ್ಲಿದ್ದ ವಸ್ತುವಿನಲ್ಲಿ ಹಲವು ಅಂಗಗಳಿದ್ದವು. ಒಂದೊಂದೇ ಅಂಗಗಳು ಹೊರ ಬಂದಿದ್ದವು. ಜನನಾಂಗದ ಕೆಲವು ಭಾಗಗಳು, ಕೂದಲಿನ ಕೆಲವು ಭಾಗಗಳು, ಕೆಲ ಅಂಗಗಳು, ದವಡೆ, ಕೈ-ಕಾಲುಗಳು ಹಾಗೂ ಅದರಲ್ಲಿ ಕೂದಲು ಸಹ ಇತ್ತು. ಇದನ್ನು ನೋಡಿ ಗಾಬರಿಗೊಂಡೆವು. ಗೊಂದಲ, ಆಶ್ಚರ್ಯ, ಭಯಾನಕತೆ ಎಲ್ಲವೂ ಆ ಸಂದರ್ಭದಲ್ಲಿತ್ತು ಎಂದು ವೈದ್ಯರು ತಿಳಿಸಿದ್ದರು.
ತನ್ನದೇ ಟ್ವಿನ್ಸ್‌ಗೆ ಗರ್ಭ ಧರಿಸಿದ್ದು ಹೇಗೆ?
ಭಗತ್‌ನ ಪ್ರಕರಣದಲ್ಲಿ ಆತನ ಅವಳಿ ತನ್ನದೇ ಹೊಟ್ಟೆಯೊಳಗೆ ಬೆಳೆದಿತ್ತು. ಅದು ಆತನ ಗಮನಕ್ಕೆ ಬಂದಿರಲಿಲ್ಲ. ಆದರೆ ಆ ಅವಳಿ ಅಪೂರ್ಣವಾಗಿ ನಿರ್ಜೀವಾವಸ್ಥೆಯಲ್ಲಿತ್ತು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಇದನ್ನು ಫೆಟಸ್-ಇನ್-ಫೀಟು (FIF) ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳು ಅತಿ ಅಪರೂಪದ್ದಾಗಿದೆ. ಒಂದು ದೋಷಪೂರಿತ ಕಶೇರುಕ ಭ್ರೂಣ ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಾಗ ಇಂತಹ ಪ್ರಕರಣಗಳಾಗುತ್ತವೆ. ಇಲ್ಲಿಯವರೆಗೆ ಇಂತಕ 100ಕ್ಕೂ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಒತ್ತಡ; ಸಾರ್ವಜನಿಕರ ಎದುರೇ ಆಧಾರ್ ಕೇಂದ್ರದ ಸಿಬ್ಬಂದಿ ಕಣ್ಣೀರು