ಬೆಲ್ಜಿಯಂ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ ಇದೀಗ ಯುರೋಪಿಯನ್ (European) ದೇಶಗಳು ಪಾಕಿಸ್ತಾನಕ್ಕೆ ಶಾಕ್ ನೀಡಿದೆ.
ಏ.22ರಂದು ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕಾದಾಟ ಜೋರಾಗಿದೆ. ದಾಳಿಯ ನಂತರ ಭಾರತ ಪಾಕ್‌ಗೆ ಒಂದೊಂದಾಗಿಯೇ ಶಾಕ್ ನೀಡುತ್ತಿದೆ. ಇದೀಗ ಯುರೋಪಿಯನ್ ದೇಶಗಳು ಪಾಕಿಸ್ತಾನಕ್ಕೆ ಶಾಕ್ ನೀಡಿದ್ದು, ಪಾಕ್ ವಾಯು ಪ್ರದೇಶವನ್ನು ವಿಮಾನ ಹಾರಾಟಕ್ಕೆ ಬಳಸದಿರಲು ನಿರ್ಧರಿಸಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಆರ್‌ಸಿಬಿ vs ಸಿಎಸ್‌ಕೆ ಹೈವೋಲ್ಟೇಜ್ ಮ್ಯಾಚ್ – ಪಂದ್ಯಕ್ಕೆ ಮಳೆ ಅಡ್ಡಿ?
ಯುರೋಪಿಯನ್ ಒಕ್ಕೂಟ ದೇಶಗಳ ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್ ಮತ್ತು ಸ್ವಿಸ್ ವಿಮಾನಗಳು ಸೇರಿದಂತೆ ಇನ್ನಿತರ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿವೆ. ಪಾಕಿಸ್ತಾನದ ವಾಯುಪ್ರದೇಶದ ಬದಲಿಗೆ ಏಷ್ಯಾಕ್ಕೆ ಸಂಪರ್ಕಿಸಲು ಇರಾನ್, ಒಮನ್, ಅಥವಾ ಇತರ ಪಕ್ಕದ ರಾಷ್ಟ್ರಗಳ ವಾಯುಪ್ರದೇಶದ ಮೂಲಕ ಕಾರ್ಯಾಚರಿಸುತ್ತಿವೆ. ಈ ಬದಲಾವಣೆಯಿಂದ ವಿಮಾನದ ಸಮಯ ಮತ್ತು ಇಂಧನ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಇದನ್ನು ಅಗತ್ಯ ಕ್ರಮವೆಂದು ವಿಮಾನಯಾನ ಸಂಸ್ಥೆಗಳು ಪರಿಗಣಿಸಿವೆ. ಪ್ರತಿಯೊಂದು ದೇಶವು ಯಾವುದೇ ಪ್ರದೇಶದ ಮೇಲೆ ಹಾರಾಟ ನಡೆಸುವಾಗ ತಮ್ಮದೇ ಆದ ಅಪಾಯದ ಮೌಲ್ಯಮಾಪನಗಳನ್ನು ನಡೆಸುತ್ತದೆ. ಹೀಗಾಗಿ ಪಾಕಿಸ್ತಾನ ವಾಯು ಪ್ರದೇಶ ಹಾರಾಟಕ್ಕೆ ಅಸುರಕ್ಷಿತ ಸ್ಥಳವೆಂದು ಪರಿಗಣಿಸಿದ್ದು, ನೋಟಮ್ (ವಾಯುಪಡೆಗೆ ಸೂಚನೆ) ನೀಡಿಲ್ಲ. ಆದರೆ ವಾಯುಪ್ರದೇಶವನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದೆ.
ಇತ್ತೀಚಿಗಷ್ಟೇ ಭಾರತ ದೇಶವು ಪಾಕ್ ವಾಯು ಪ್ರದೇಶವನ್ನು ಬಳಸುವುದನ್ನು ನಿಲ್ಲಿಸಿತ್ತು. ಜೊತೆಗೆ ಪಾಕಿಸ್ತಾನವೂ ಕೂಡ ಭಾರತದ ವಾಯು ಪ್ರದೇಶವ ಬಳಸುವುದನ್ನು ನಿಲ್ಲಿಸಿತ್ತು. ಇದರ ಬೆನ್ನಲ್ಲೇ ಯುರೋಪಿಯನ್ ದೇಶಗಳು ನಿರ್ಧಾರ ಕೈಗೊಂಡಿದೆ.
ಇನ್ನೂ ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಕುರಿತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳು ಸಂಯಮ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದು, ಗಡಿಗಳಲ್ಲಿ ಉದ್ವಿಗ್ನತೆ ಏರಿಕೆಯಿಂದ ಯಾರಿಗೂ ಯಾವುದೇ ಪ್ರಯೋಜನವಿಲ್ಲ. ಇಬ್ಬರೂ ಸಂಯಮ ವಹಿಸುವಂತೆ ಒತ್ಥಾಯಿಸಿದ್ದಾರೆ. ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಕಲ್ಲಾಸ್ ಜೊತೆಗೆ ಜೈಶಂಕರ್ ಚರ್ಚೆ ನಡೆಸಿದರು. ಇದೇ ವೇಳೆ ಇಶಾಕ್ ದಾರ್, ಭಾರತ ದೇಶವು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಹಾಗೂ ಪಾಕ್ ವಿರುದ್ಧ ಪ್ರಚೋದನಾಕಾರಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಉಗ್ರರ ದಾಳಿ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ