ಸಿಡ್ನಿ: ಡ್ರಿಂಕ್ & ಡ್ರೈವ್ ಕೇಸಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಅರೆಸ್ಟ್ ಆಗಿದ್ದಾರೆ.
ಭಾನುವಾರ (ಏ.5ರಂದು) ಸಿಡ್ನಿಯ ಮಲಾಬಾರ್ ರೋಡ್ನ ಮರೂಬ್ರಾನಲ್ಲಿ ಪೊಲೀಸ್ ಅಧಿಕಾರಿಗಳು ಡ್ರಿಂಕ್ & ಡ್ರೈವ್ ಟೆಸ್ಟ್ (Drink and Drive) ಮಾಡುತ್ತಿದ್ದರು. ಇದನ್ನು ಗಮನಿಸಿದ ವಾರ್ನರ್ ಟೆಸ್ಟ್ ಮಾಡುತ್ತಿದ್ದ ಸ್ಥಳದಿಂದ ದೂರದಲ್ಲೇ ಕಾರನ್ನು ಪಾರ್ಕ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ವಾರ್ನರ್ ಅವರ ಉಸಿರಾಟದ ಪರೀಕ್ಷೆ ಮಾಡಿದ್ದಾರೆ. ಆಗ ಮದ್ಯಸೇವನೆ ಮಾಡಿರುವುದು ದೃಢವಾಗಿದೆ. ಇದನ್ನೂ ಓದಿ: ಮಳೆಯಿಂದ ಕೋಲ್ಕತ್ತಾ vs ಪಂಜಾಬ್ ಪಂದ್ಯ ರದ್ದು – ಆರ್ಸಿಬಿ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಜಿಗಿದ ಶ್ರೇಯಸ್ ಪಡೆ
ವರದಿಗಳ ಪ್ರಕಾರ, ಆಲ್ಕೋಹಾಲ್ ಲೆವೆಲ್ 0.1 ಆಗಿದ್ದು, ಇದು ಆಸ್ಟ್ರೇಲಿಯಾ ಕಾನೂನುಬದ್ಧ ಮಿತಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಎನ್ನಲಾಗಿದೆ. ಕೂಡಲೇ ಪೊಲೀಸರು ವಾರ್ನರ್ ಅವರನ್ನು ಬಂಧಿಸಿ, ಮರೂಬ್ರಾ ಪೊಲೀಸ್ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ, ಬಿಟ್ಟುಕಳುಹಿಸಿದ್ದಾರೆ. ಮೇ 7ರಂದು ವಾರ್ನರ್ ಕೋರ್ಟ್ಗೆ ಹಾಜರಾಗಲಿದ್ದಾರೆ.
ಡೇವಿಡ್ ವಾರ್ನರ್ ಕಳೆದ ವಾರ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL) ಕರಾಚಿ ಕಿಂಗ್ಸ್ ಪರ ಕಾಣಿಸಿಕೊಂಡಿದ್ದರು. ಈ ಮೊದಲು ಪಾಕಿಸ್ತಾನ ಕ್ರಿಕೆಟ್ ಲೀಗ್ಗೆ ವಾರ್ನರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಧಾರಣವಾಗಿ ಲೀಗ್ ಆರಂಭಗೊಂಡ ಬಳಿಕ ಆಟಗಾರರು ಮಧ್ಯೆ ಸ್ವದೇಶಕ್ಕೆ ತೆರಳುವುದಿಲ್ಲ. ವಾರ್ನರ್ ಸ್ವದೇಶಕ್ಕೆ ತೆರಳುವಾಗಲೇ ಅನುಮಾನ ವ್ಯಕ್ತವಾಗಿತ್ತು. ಸದ್ಯ ಲೀಗ್ನಿಂದ ಹೊರಬರುವ ಉದ್ದೇಶದಿಂದಲೇ ಡ್ರಿಂಕ್ & ಡ್ರೈವ್ ಕೇಸ್ನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.ಇದನ್ನೂ ಓದಿ: IPL 2026: ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಮಳೆ ಅಡ್ಡಿ

