ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್ ಸ್ಟುಡಿಯೋಸ್‌ಗೆ (Jollywood Studios) ಬೀಗ ಬಿದ್ದಿದೆ. ಬಿಗ್ ಬಾಸ್ (Bigg Boss Kannada 12) ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ನಿಯಮ ಮೀರಿ ಜಾಲಿವುಡ್ ಸ್ಟುಡಿಯೋಸ್ ನಡೆಸುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಪಾಲನೆ ಆಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್‌ಗೆ ಭೇಟಿ ನೀಡಿದರು. ಇದನ್ನೂ ಓದಿ: ಜಾಲಿವುಡ್ ಸ್ಟುಡಿಯೋಸ್ ಬಂದ್‌ಗೆ ನೋಟಿಸ್ - ಬಿಗ್ ಬಾಸ್ ಮನೆಗೆ ಬೀಳುತ್ತಾ ಬೀಗ?
ರಾಮನಗರ ತಹಶೀಲ್ದಾರ್ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್ ಒಳಗೆ ಪರಿಶೀಲನೆ ನಡೆಸಿದರು.
ನೋಟಿಸ್ ತೆಗೆದುಕೊಳ್ಳಲು ಜಾಲಿವುಡ್ ಆಡಳಿತ ಮಂಡಳಿ ನಕಾರ ಮಾಡಿತು. ಆಗ ಜಾಲಿವುಡ್ ಸ್ಟುಡಿಯೋಸ್ ಸಿಬ್ಬಂದಿಯನ್ನು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ಸ್ವೀಕರಿಸೋದಕ್ಕೆ ಬರಲು ಅರ್ಧ ಗಂಟೆ ಬೇಕಾ ಎಂದು ಗರಂ ಆದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು
ಕೂಡಲೇ ನೋಟೀಸ್ ತೆಗೆದುಕೊಳ್ಳಿ. ಅಧಿಕೃತವಾಗಿ ಇಂದು ಸೀಜ್ ಮಾಡ್ತೀವಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಜೆ 7 ಗಂಟೆ ವರೆಗೂ ಎಕ್ಸಿಟ್ ಗೇಟ್ ಓಪನ್ ಮಾಡಿಕೊಳ್ಳಿ. ಕೂಡಲೇ ಜಾಲಿವುಡ್ ಸ್ಟುಡಿಯೋ ಕ್ಲೋಸ್ ಮಾಡುವಂತೆ ಸೂಚನೆ ನೀಡಿದರು.
ಕೊನೆಗೆ ಜಾಲಿವುಡ್ ಆಡಳಿತ ಮಂಡಳಿ ನೋಟಿಸ್ ಸ್ವೀಕರಿಸಿತು. ನಾಳೆಯಿಂದ ಜಾಲಿವುಡ್ ಸ್ಟುಡಿಯೋಸ್ ಯಾವುದೇ ಕಾರ್ಯಾಚರಣೆ ಮಾಡಬಾರದು. ಎಲ್ಲಾ ರೀತಿಯ ಕಾರ್ಯಚಟುವಟಿಕೆ ಸ್ಥಗಿತ ಮಾಡುವಂತೆ ಸೂಚನೆ ನೀಡಲಾಯಿತು. ಸ್ಟುಡಿಯೋಸ್ ಸ್ವತಃ ತಾವೇ ನಿಂತು ತಹಶೀಲ್ದಾರ್ ಬೀಗ ಹಾಕಿದರು. ಬಿಗ್ ಬಾಸ್ ಸ್ಥಗಿತಕ್ಕೂ ಸೂಚನೆ ನೀಡಿದರು.
ಬಿಗ್ ಬಾಸ್‌ನಿಂದ ಆಚೆ ಬರ್ತಾರಾ ಸ್ಪರ್ಧಿಗಳು?
ಸೀಲ್‌ಡೌನ್ ಆದಮೇಲೆ ಒಳಗೆ ಯಾವುದೇ ಆಕ್ಟಿವಿಟಿ ನಡೆಯುವಂತಿಲ್ಲ. ಯಾವುದೇ ವ್ಯಕ್ತಿಗಳೂ ಇರುವಂತಿಲ್ಲ. ಹಾಗಾಗಿ, ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನ ಆಚೆ ಕಳುಹಿಸುವ ಸಾಧ್ಯತೆ ಇದೆ.