ಬೆಂಗಳೂರು: ಕಾಂಗ್ರೆಸ್ ಕೋಟಾದ ಸಚಿವ ಸ್ಥಾನ ಭರ್ತಿಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಘಳಿಗೆ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಈಗ ಜೆಡಿಎಸ್ ಕೋಟಾದ ಸಚಿವ ಸ್ಥಾನ ಭರ್ತಿ ಸಮಯ ಹಾಗೂ ಗಳಿಗೆ ಕೂಡಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಸ್ಥಾನ ಭರ್ತಿಯಾಗುವುದಿಲ್ಲ. ಜೆಡಿಎಸ್‍ನಲ್ಲಿ ಎರಡು ಸ್ಥಾನ ಖಾಲಿ ಇದ್ದು, ಕಾಂಗ್ರೆಸ್ ಸಚಿವರ ಜೊತೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಸ್ಥಾನ ಹಂಚಿಕೆ ಫೈನಲ್ ಆಗದ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಥಾನ ಭರ್ತಿ ಅನುಮಾನವಾಗಿದೆ.
ಇಂದು ಸಮಯ ಸರಿ ಇಲ್ಲದ ಕಾರಣ ಸ್ಥಾನ ಭರ್ತಿಗೆ ಜೆಡಿಎಸ್ ಹಿಂದೇಟು ಹಾಕುತ್ತಿದೆ. ಮತ್ತೊಂದು ದಿನ ಸ್ಥಾನ ಭರ್ತಿ ಮಾಡಿ ಪ್ರಮಾಣ ವಚನ ಕಾರ್ಯಕ್ರಮ ಮಾಡಲು ಜೆಡಿಎಸ್ ವರಿಷ್ಠರು ನಿರ್ಧಾರ ಮಾಡಿದ್ದಾರೆ.
ಧನುರ್ಮಾಸ ಆಗಿರುವುದಕ್ಕೆ ಜೆಡಿಎಸ್‍ನಿಂದ ಯಾರನ್ನು ಮಂತ್ರಿ ಮಾಡುವುದು ಬೇಡ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣ ತೀರ್ಮಾನಕ್ಕೆ ಬಂದಿದ್ದಾರೆ. ಇದರೊಂದಿಗೆ ಇಂದು ಮಂತ್ರಿ ಆಗುತ್ತೇವೆ ಎನ್ನುವ ಕನವರಿಕೆಯಲ್ಲಿದ್ದ ಆಕಾಂಕ್ಷಿಗಳಿಗೆ ಗೌಡರ ಕುಟುಂಬ ಶಾಕ್ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv