ಬೆಂಗಳೂರು: ವೋಟ್ ಹಾಕಲು ಬಂದ ಸುಮಾರು 367 ಮತದಾರರು ತಮ್ಮ ಹೆಸರಿಲ್ಲದೇ ಕಂಗಾಲಾದ ಘಟನೆ ನಗರದ ಕೆಎಲ್‍ಇ ಕಾಲೇಜಿನ ಮತಗಟ್ಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದಲ್ಲಿ ಬರುವ ಬೂಥ್‍ನಲ್ಲಿ ವೋಟ್ ಹಾಕಲು ಬಂದ 367 ಜನರು ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಸದ್ಯ ಮತದಾರರು ಬೂತ್ ಮುಂದೆ ಜಮಾಯಿಸಿ ಚುನಾವಣೆ ನಿಲ್ಲಿಸುವಂತೆ ಪ್ರತಿಭಟಿಸುತ್ತಿದ್ದಾರೆ.
Advertisement
Advertisement
ಬೆಳಗ್ಗೆ 6 ಗಂಟೆಯಿಂದ ಮತದಾರರು ಮತದಾನಕ್ಕೆ ಕಾಯುತ್ತಿದ್ದರು. ಆದರೆ ವೋಟ್ ಹಾಕಲು ಆಗದೇ ಮತದಾರರು ಅಸಹಾಯಕರಾಗಿದ್ದಾರೆ. ವೋಟಿಂಗ್ ಲಿಸ್ಟ್ ಪರಿಶೀಲಿಸಿದಾಗ ಮತದಾರರ ಹೆಸರು ಅದರಲ್ಲಿ ಡಿಲಿಟೇಡ್ ಎಂದು ತೋರಿಸುತ್ತಿದೆ.
Advertisement
ಈ ಬಗ್ಗೆ ಮತದಾರರು ಪರಿಶೀಲನೆ ಮಾಡಿ ಎಂದು ಅಧಿಕಾರಿಗಳ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಪರಿಶೀಲಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ಚುನಾವಣೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಪರಿಶೀಲನೆ ನಡೆಸಿದ ನಂತರ ಚುನಾವಣೆ ಮುಂದುವರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.