ಬೆಂಗಳೂರು/ಮಂಡ್ಯ: ಶನಿವಾರ, ಒಬ್ಬಟ್ಟು ತಿಂದು ಭರ್ಜರಿಯಾಗಿಯೇ ಯುಗಾದಿ ಹಬ್ಬ ಆಚರಿಸಿದ್ದ ಸಿಲಿಕಾನ್ ಸಿಟಿ ಜನರು ಇಂದು ಹೊಸತೊಡಕು ಆಚರಿಸಲು ಸಜ್ಜಾಗಿದ್ದಾರೆ. ಆದರೆ ಹಬ್ಬದ ಖುಷಿಯಲ್ಲಿದ್ದ ಜನರಿಗೆ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯ ಕಹಿ ಅನುಭವವಾಗುತ್ತಿದೆ.
ಇಂದು ಮಾರ್ಕೆಟ್ ಹೋಗಿ ಚಿಕನ್, ಮಟನ್ ರೇಟ್ ಕೇಳಿದರೆ ಜನರು ಶಾಕ್ ಆಗುತ್ತಾರೆ. ಏಕೆಂದರೆ ಚಿಕನ್ ಒಂದು ಕೆಜಿಗೆ 250 ರೂ. ಆಗಿದೆ. ಅಲ್ಲದೆ ಮಟನ್ ಒಂದು ಕೆಜಿಗೆ 550 ಆಗಿದೆ.
Advertisement
ಹೀಗಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದರೆ, ಇತ್ತ ವ್ಯಾಪಾರಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ನೆಪದಲ್ಲಿ ಮತದಾರರಿಗೆ ಭರ್ಜರಿ ಗಿಫ್ಟ್-‘ಹೊಸತೊಡಕು’ ರೂಪದಲ್ಲಿ ಮಟನ್-ಚಿಕನ್ ಭಾಗ್ಯ!
Advertisement
Advertisement
ಮಂಡ್ಯದಲ್ಲೂ ಇಂದು ಮಟನ್‍ಗೆ ಭಾರೀ ಬೇಡಿಕೆಯಾಗಿದೆ. ಯುಗಾದಿ ಹಬ್ಬದ ಮಾಂಸದಡುಗೆಗೆ ಮಂಡ್ಯದಲ್ಲಿ ಭರ್ಜರಿ ಬೇಡಿಕೆಯಿದೆ. ಇಷ್ಟು ದಿನ ಲೋಕಸಭಾ ಚುನಾವಣಾ ಕಾವಿನಿಂದ ರಂಗೇರಿದ್ದ ಮಂಡ್ಯ, ಶನಿವಾರ ಯುಗಾದಿ ಹಬ್ಬ ಮುಗಿಸಿ ಇಂದು ವರ್ಷ ತೊಡಕಿನ ಖುಷಿಯಲ್ಲಿ ಇದ್ದಾರೆ.
Advertisement
ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.