
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಾಯ್ಕಾಟ್ (Boycott) ನಡುವೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಪೈರಸಿ (Piracy) ಚಿತ್ರತಂಡಕ್ಕೆ ಶಾಕ್ ನೀಡಿದೆ. ಸಿನಿಮಾ ರಿಲೀಸ್ ಗೂ ಮೊದಲೇ ಹಲವು ವೆಬ್ ಸೈಟ್ ಗಳಲ್ಲಿ ಸಿನಿಮಾವನ್ನು ಲೀಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆಯೂ ಕೂಡ ಪಠಾಣ್ ಸಿನಿಮಾದ ಟ್ರೈಲರ್ ಕೂಡ ಒಂದು ದಿನ ಮುಂಚೆಯೇ ಲೀಕ್ ಆಗಿತ್ತು.
ಹಿಂದೂ ಧರ್ಮಕ್ಕೆ ಸಿನಿಮಾ ತಂಡ ಅವಮಾನ ಮಾಡಿದೆ ಎನ್ನುವ ಕಾರಣಕ್ಕಾಗಿ ಕೆಲವರು ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಂಚು ಮಾಡಿ ಸಿನಿಮಾವನ್ನು ಸೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಹಣದಾಹಿ ಕೆಲ ವೆಬ್ ಸೈಟ್ ಗಳು ಸಿನಿಮಾ ರಿಲೀಸ್ ದಿನವೇ ಇಡೀ ಚಿತ್ರವನ್ನು ಲೀಕ್ ಮಾಡಿವೆ. ಹಾಗಾಗಿ ಚಿತ್ರತಂಡಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್
ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಸ್ವತಃ ಶಾರುಖ್ ಖಾನ್ ಅವರೇ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ನೀಡಿದಕ್ಕೆ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಆದರೆ, ಹಲವು ಅಡೆತಡೆಗಳನ್ನು ಅವರು ಎದುರಿಸುವುದು ಅನಿವಾರ್ಯವಾಗಿದೆ. ಕೆಲ ರಾಜ್ಯಗಳಲ್ಲಂತೂ ವಿಪರೀತ ತೊಂದರೆ ಮಾಡಲಾಗುತ್ತಿದೆ. ಥಿಯೇಟರ್ ಗೆ ನುಗ್ಗಿ ಪ್ರದರ್ಶನವನ್ನು ನಿಲ್ಲಿಸಲಾಗುತ್ತಿದೆ.
ಈ ಪ್ರತಿಭಟನೆ ಕರ್ನಾಟಕದಲ್ಲೂ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ಕಡೆ ಚಿತ್ರಪ್ರದರ್ಶನ ನಿಲ್ಲಿಸುವಂತೆ ಥಿಯೇಟರ್ ಗೆ ಮುತ್ತಿಗೆ ಹಾಕುವಂತಹ ಕೆಲಸಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಸಿನಿಮಾಗಳಿಗೆ ತೊಂದರೆ ಮಾಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರೂ, ಜನರು ಮಾತ್ರ ಪ್ರತಿಭಟನೆಯನ್ನು ಕೈ ಬಿಟ್ಟಿಲ್ಲ. ಹಲವು ಕಡೆ ಮತ್ತೆ ಬಾಯ್ಕಾಟ್ ಮಾಡುತ್ತಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k