ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಮತ್ತು ಶೋಭಾ ಶೆಟ್ಟಿಗೆ (Shobha Shetty) ಅದ್ಧೂರಿ ಸ್ವಾಗತ ಸಿಕ್ಕಿದೆ. ಒಳಗಿರುವ ಸದಸ್ಯರಿಗೆ ಇವರಿಬ್ಬರ ಆಗಮನ ಶಾಕ್ ಕೊಟ್ಟಿದೆ. ಜೋಶ್‌ನಲ್ಲಿರುವ ರಜತ್ ಮತ್ತು ಶೋಭಾಗೆ ‘ಬಿಗ್ ಬಾಸ್’ ಟಾಸ್ಕ್ ಒಂದು ಆಡಿಸಿದರು. ಮನೆಯಲ್ಲಿರುವ ಸ್ಪರ್ಧಿಗಳ ಆಟ ಕುರಿತು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ, ಧರ್ಮಗೆ (Dharma Kirthiraj) ಐ ಲೈಕ್ ಯೂ ಎಂದು ಶೋಭಾ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ಮನೆಯ ಗಾರ್ಡನ್ ಏರಿಯಾದಲ್ಲಿ ರಜತ್ (Rajath Kishen) ಮತ್ತು ಶೋಭಾ ಅವರನ್ನು ನಿಲ್ಲಿಸಿದ ಬಿಗ್ ಬಾಸ್, ಇಬ್ಬರಿಗೂ ಪ್ರಶ್ನೆಗಳು ಕೇಳುತ್ತಾ ಹೋದರು. ಉತ್ತರ ಹೇಳಿದ ಬಳಿಕ ಇಬ್ಬರು ಕೂಡ ತೆಂಗಿನಕಾಯಿಯನ್ನು ಒಡೆಯಬೇಕು ಎಂದರು. ಅಂದರಂತೆ, ಈ ಮನೆಯಲ್ಲಿ ಯಾರ ಮುಖವಾಡವನ್ನು ಕಳಚಿ, ಅವರ ಅಸಲಿ ಮುಖವನ್ನು ಬಯಲಿಗೆ ಎಳೆಯುತ್ತೀರಿ? ಎಂದು ಶೋಭಾಗೆ ಬಿಗ್ ಬಾಸ್ ಪ್ರಶ್ನೆ ಕೇಳಿದರು. ನನ್ನ ಪ್ರಕಾರ, ಗೌತಮಿ ಇನ್ನೂ ಮುಖವಾಡ ಹಾಕಿಕೊಂಡಿದ್ದಾರೆ. ಅವರ ಅಸಲಿ ಮುಖವನ್ನು ನಾನು ಬಯಲು ಮಾಡಬಹುದು ಎನ್ನುತ್ತಾ ತೆಂಗಿನಕಾಯಿಯನ್ನು ಶೋಭಾ ಒಡೆದಿದ್ದಾರೆ. ಇದನ್ನೂ ಓದಿ:ಮಗನಿಗೆ ಬೇಬಿ ರೆಬೆಲ್ ಎಂದ ಅಭಿಷೇಕ್- ನಟನ ಪೋಸ್ಟ್‌ಗೆ ಅಂಬಿ ಫ್ಯಾನ್ಸ್ ದಿಲ್ ಖುಷ್
ಆ ನಂತರ ನೀವು ಈ ಮನೆಯ ಯಾವ ಸದಸ್ಯರ ಜೊತೆ ಸ್ನೇಹದಿಂದ ಇರಲು ಬಯಸುತ್ತೀರಿ? ಶೋಭಾಗೆ ಪ್ರಶ್ನೆ ಎದುರಾಯಿತು. ಇರೋದ್ರಲ್ಲಿ ಒಬ್ಬರು ನನಗೆ ಇಂಪ್ರೆಸ್ ಎನ್ನಿಸಿದರು. ಅದು ಧರ್ಮ. ನಾನು ಒಳಗೆ ಲಗೇಜ್ ತರುವಾಗ ಅವರು ಬಂದು ಅದನ್ನು ತೆಗೆದುಕೊಂಡರು. ಅವರು ನಡೆದುಕೊಂಡ ರೀತಿ ನನಗೆ ಇಷ್ಟ ಆಯ್ತು. ಐ ಲೈಕ್ ಯೂ ಧರ್ಮ ಎಂದರು. ಶೋಭಾರ ಮಾತಿಗೆ ಧರ್ಮ ನಾಚಿ ನೀರಾದರು.
ಇನ್ನೂ ಈ ಮನೆಯ ಯಾವ ಸ್ಪರ್ಧಿಗೆ ನೇರಾ ನೇ ಠಕ್ಕರ್ ಕೊಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ನಾನು ಮಂಜು ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನಟಿ ಉತ್ತರಿಸಿದರು. ರಜತ್ ಅವರು ತ್ರಿವಿಕ್ರಮ್ ಹೆಸರನ್ನು ಹೇಳಿದರು. ಮನೆಯ ಯಾವ ಸದಸ್ಯರ ಜೊತೆ ಅಂತರ ಕಾಯ್ದುಕೊಳ್ಳುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ನಾನು ಮಂಜುರಿಂದ ಅಂತರ ಕಾಯ್ದುಕೊಳ್ಳುತ್ತೇನೆ. ಮಂಜು ನಂಬಿಕಸ್ಥ ಎಂದು ಎನಿಸುವುದಿಲ್ಲ ಎಂದರು. ಚೈತ್ರಾ ಕುಂದಾಪುರ ಹೆಸರನ್ನು ರಜತ್ ಹೇಳಿದರು.
ಇನ್ನೂ ಅನುಷಾ (Anusha Rai) ಎಲಿಮಿನೇಟ್ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಜತ್ ಮತ್ತು ಶೋಭಾ ಆಗಮನವಾಗಿದೆ. ರಜತ್, ಶೋಭಾ ಕೂಡ ಇಬ್ಬರೂ ಸ್ಟ್ರಾಂಗ್ ಸ್ಪರ್ಧಿಗಳೇ ಹಾಗಾಗಿ ಇನ್ಮೇಲೆ ಅಸಲಿ ಆಟ ಶುರುವಾಗಲಿದೆ. ಯಾರಿಗೆ ಹೇಗೆ ಠಕ್ಕರ್ ಕೊಡುತ್ತಾರೆ ಕಾಯಬೇಕಿದೆ.