ಕನ್ನಡದ ಅಗ್ನಿಸಾಕ್ಷಿ ನಟಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಅದಕ್ಕೆ ಕಾರಣ, ‘ಬಿಗ್ ಬಾಸ್ ತೆಲುಗು’ 7ರಲ್ಲಿ (Bigg Boss Telagu 7) ನಟಿ ಸ್ಪರ್ಧಿಯಾಗಿ ಪ್ರೇಕ್ಷಕರ ಮನಗೆದ್ದಿದ್ದು, ನಟನೆಯ ಜೊತೆಗೆ ನಿರೂಪಣೆಯತ್ತ ಶೋಭಾ ಶೆಟ್ಟಿ (Shobha Shetty) ಮುಖ ಮಾಡಿದ್ದಾರೆ.
Advertisement
ನಾಗಾರ್ಜುನ ನಿರೂಪಣೆ ಬಿಗ್ ಬಾಸ್‌ನಲ್ಲಿ ಶೋಭಾ ಸ್ಟ್ರಾಂಗ್ ಸ್ಪರ್ಧಿಯಾಗಿ ಹೈಲೆಟ್ ಆಗಿದ್ದರು. ಇದಾದ ನಂತರ ಶೋಭಾ ಏನ್ಮಾಡ್ತಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಈಗ ಆ್ಯಂಕರ್ ಆಗಿ ನಟಿ ಭಡ್ತಿ ಪಡೆದಿದ್ದಾರೆ. ‘ಕಾಫಿ ವಿತ್ ಶೋಭಾ ಶೆಟ್ಟಿ’ ಕಾರ್ಯಕ್ರಮದಲ್ಲಿ ನಟ-ನಟಿಯರ ಸಂದರ್ಶನ ಮಾಡ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಿರೂಪಕಿಯಾಗಿ ಗುರುತಿಸಿಕೊಳ್ತಿದ್ದಾರೆ.
Advertisement
Advertisement
ತೆಲುಗು ಸೀರಿಯಲ್, ಸಿನಿಮಾಗಳ ಅವಕಾಶಗಳು ಹರಿದು ಬರುತ್ತಿವೆ. ಶೋಭಾ ಕೂಡ ಸಖತ್ ಚ್ಯುಸಿಯಾಗಿ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೆ ಕನ್ನಡಕ್ಕೆ ಯಾವಾಗ ಬರುತ್ತಾರೆ ಎಂದು ಅಭಿಮಾನಿಗಳು ಕೂಡ ಕಾತರದಿಂದ ಎದುರು ನೋಡ್ತಿದ್ದಾರೆ.
Advertisement
ಅಂದಹಾಗೆ, ಇತ್ತೀಚೆಗೆ ಶೋಭಾ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ (Yashwanth Reddy) ಜೊತೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರ ಎಂಗೇಜ್‌ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:‘ಸಲಾರ್’ ಸಕ್ಸಸ್ ಬಳಿಕ ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್?
ಕನ್ನಡದ ಅಗ್ನಿಸಾಕ್ಷಿ, ನಮ್ಮ ರುಕ್ಕು, ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶೋಭಾ ನಟಿಸಿದ್ದಾರೆ. ಅದರಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ನ ತನು ಪಾತ್ರದ ಮೂಲಕ ಶೋಭಾ ಮನೆಮಾತಾಗಿದ್ದರು. ಇಂದಿಗೂ ಈ ಪಾತ್ರವನ್ನು ಸ್ಮರಿಸುತ್ತಿದ್ದಾರೆ.