ದೊಡ್ಮನೆಯ (BBK 11) ಆಟಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಬರುತ್ತಿದ್ದಂತೆ ಶೋಭಾ ಸಖತ್ ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ. ಇದೀಗ ನಿಮ್ಮ ಮುಖವಾಡ ಕಳಚುತ್ತೇನೆ ಅಂತ ಭಯನಾ? ಎಂದು ಗೌತಮಿಗೆ ಶೋಭಾ ಅವಾಜ್ ಹಾಕಿದ್ದಾರೆ.
ಉಗ್ರಂ ಮಂಜು ನಂತರ ಗೌತಮಿ ಜಾಧವ್ ಕೂಡ ಶೋಭಾರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗಿಡಲು ಹೆಸರು ಸೂಚಿಸಿದ್ದಾರೆ. ‘ಬಿಗ್ ಬಾಸ್’ ನೀಡಿದ ಟಾಸ್ಕ್‌ನಲ್ಲಿ ರಜತ್ ಮತ್ತು ಶೋಭಾ ಇವರಲ್ಲಿ ಕ್ಯಾಪ್ಟನ್ ಆಗಲು ಯಾರು ಅರ್ಹ? ಅನರ್ಹ ಎಂದು ಮನೆ ಮಂದಿ ಹೇಳಬೇಕಿತ್ತು. ಗೌತಮಿ ಅವರು ಶೋಭಾರನ್ನು ಕ್ಯಾಪ್ಟನ್ ಆಗಲು ಅನರ್ಹ ಎಂದಿದ್ದಾರೆ. ಗೌತಮಿ ಅವರು ಶೋಭಾ ಶೆಟ್ಟಿ ಅವರನ್ನು ಹೊರಗೆ ಇಟ್ಟಿದ್ದಾರೆ. ಅವರು ಕೊಟ್ಟ ಕಾರಣಕ್ಕೆ, ನಿಮ್ಮಲ್ಲಿ ಪಾಸಿಟಿವ್ ಇಲ್ವೇ ಇಲ್ಲ, ಇರೋದೆಲ್ಲ ನೆಗೆಟಿವ್ ಎಂದು ಗೌತಮಿಗೆ ನೇರವಾಗಿ ಚಾಟಿ ಬೀಸಿದ್ದಾರೆ ಶೋಭಾ. ಇದನ್ನೂ ಓದಿ:ಕೊಲೆ ಯತ್ನದ ಕೇಸ್‌ನಲ್ಲಿ ನಟ ತಾಂಡವ್ ರಾಮ್ ಅರೆಸ್ಟ್
ಶೋಭಾ ಅವರು ಅನರ್ಹ ಅಂತ ಯಾಕೆ ಹೇಳುತ್ತಿದ್ದೇನೆ ಎಂದರೆ, ಮೊದಲಿಗೆ ನನ್ನ ಮುಖವಾಡ ಕಳಚಬೇಕು ಎನ್ನುವುದು ಶೋಭಾ ಅವರ ಗುರಿ. ನಿಮ್ಮ ಟೀಮ್‌ಗೆ ನಾನು ಬಂದರೆ ನೀವು ಅದೇ ಗುಂಗಿನಲ್ಲಿ ಇರುತ್ತೀರಾ ಹೊರತು, ನನ್ನ ಪಾಸಿಟಿವ್ ಕಡೆ ನೀವು ನೋಡೋದೆ ಇಲ್ಲ. ನೆಗೆಟಿವ್ ಫಸ್ಟ್ ನೋಡುತ್ತೀರಾ ಅಂದರೆ ತಂಡದ ನಾಯಕನಿಗೆ ಇರಬೇಕಾದ ಲಕ್ಷಣ ಅಲ್ಲ ಎಂದಿದ್ದಾರೆ. ಅದಕ್ಕೆ ನಾನು ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ? ಎಂದು ನೇರವಾಗಿ ಗೌತಮಿಗೆ ಶೋಭಾ ಪ್ರಶ್ನಿಸಿದ್ದಾರೆ. 200 ದಿನ ಇದ್ದರೂ ಅದು ಸಾಧ್ಯವಿಲ್ಲ ಎಂದು ಶೋಭಾಗೆ ಗೌತಮಿ ತಿರುಗೇಟು ನೀಡಿದ್ದಾರೆ.
ಅದಕ್ಕೆ ಶೋಭಾ ಶೆಟ್ಟಿ ಮಾತನಾಡಿ, ಆಡಿಯನ್ಸ್ ಆಗಿ ನಾನು ನಿಮ್ಮನ್ನು ಹೊರಗೆ ನೋಡಿದಾಗ ಪಾಸಿಟಿವ್ ಅಂತ ಹೇಳುತ್ತೀರಾ. ಆದರೆ ನಿಮ್ಮಲ್ಲಿ ಇರೋದೆಲ್ಲ ನೆಗೆಟಿವ್. ಪಾಸಿಟಿವಿಟಿ ನಿಮಗೆ ಇಲ್ವೇ ಇಲ್ಲ. ಇರೋದೆಲ್ಲ ನೆಗೆಟಿವ್ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು ಪಾಸಿಟಿವಿಟಿ ನನಗೆ ಅಂತ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಇವರ ವಾಗ್ವಾದಕ್ಕೆ ಮನೆಮಂದಿ ಗಪ್‌ಚುಪ್ ಎಂದಿದ್ದಾರೆ. ಇನ್ಮೇಲೆ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಹಾವಳಿ ಹೇಗಿರುತ್ತದೆ? ಎಂದು ಕಾದು ನೋಡಬೇಕಿದೆ.