ಬಾಗಲಕೋಟೆ: ಬಿಜೆಪಿ ವೇದಿಕೆಯಲ್ಲಿ ಯಡಿಯೂರಪ್ಪ ಒಬ್ಬನೇ, ಜಗದೀಶ ಶೆಟ್ಟಿ, ಈಶ್ವರಪ್ಪ ಮತ್ತು ಅನಂತ್ ಕುಮಾರ್ ಬೇರೆ ಬೇರೆ ಬರುತ್ತಾರೆ. ಯಡಿಯೂರಪ್ಪನ ಜೊತೆಯಲ್ಲಿರೋದು ಶೋಭಾ ಮಾತ್ರ ಎಂದು ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ್ ಕಾಶಪ್ಪನವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ಡಿಸೆಂಬರ್ 6ರಂದು ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ಸಭೆಯ ಬಹಿರಂಗ ಭಾಷಣದಲ್ಲಿ ಶಾಸಕ ಕಾಶಪ್ಪನವರ್ ಮಾತನಾಡಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಎಸ್‍ವೈ ಬಗ್ಗೆ ಏಕವಚನದಲ್ಲೇ ನಾಲಿಗೆ ಹರಿಬಿಟ್ಟಿರುವ ಶಾಸಕ, ಜೈಲಿಗೆ ಹೋಗಿ ಬಂದ ಹೇಡಿ ರಾಜಕಾರಣಿ ಯಡಿಯೂರಪ್ಪ, ನಿನ್ನ ಹತ್ತಿರ ಹೇಳಿಸಿಕೊಳ್ಳುವಷ್ಟು ದಡ್ಡ ನಾನಲ್ಲ, ನೀನು 14 ದಿವಸ ಜೈಲಿಗೆ ಹೋಗಿ ಬಂದಿದ್ದೀಯಾ. ನಿನ್ನ ಹಾಗೆ ನಾನು ಜೈಲಿಗೆ ಹೋಗಿ ಬಂದಿಲ್ಲ ಎಂದು ಬಿಎಸ್‍ವೈ ಬಗ್ಗೆ ಏಕವಚನದಲ್ಲೇ ಟೀಕಿಸಿದ್ದಾರೆ.
ಈ ಹಿಂದೆ ಹುನಗುಂದ ಪರಿವರ್ತನಾ ಯಾತ್ರೆ ವೇಳೆ ಯಡಿಯೂರಪ್ಪ, ಶಾಸಕ ಕಾಶಪ್ಪನವರೇ ನಿಮ್ಮ ಆಟ ಇನ್ಮುಂದೆ ನಡೆಯಲ್ಲ ಎಂದು ಟೀಕಿಸಿದ್ದರು. ಅವರ ಟೀಕೆಗೆ ತಿರುಗೇಟು ನೀಡುವ ನೆಪದಲ್ಲಿ ಶಾಸಕ ಕಾಶಪ್ಪನವರು ಈ ರೀತಿಯಾಗಿ ಮಾತನಾಡುತ್ತಾ, ಬಿಜೆಪಿಯವರು ತಮ್ಮ ಮನಸ್ಸನ್ನ ತಾವೇ ಪರಿವರ್ತನೆ ಮಾಡಿಕೊಳ್ಳಲು ಹೊರಟಿದ್ದಾರೆಂದು ಲೇವಡಿ ಮಾಡಿದ್ದಾರೆ.
https://www.youtube.com/watch?v=k6xppEqsMjU