ನವದೆಹಲಿ: ಸಂಸದೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿರುವ ಖದೀಮರು 20 ಲಕ್ಷ ರೂ. ಎಗರಿಸಿದ್ದಾರೆ.
ಪಾರ್ಲಿಮೆಂಟ್‍ನ ಎಸ್‍ಬಿಐ ಬ್ಯಾಂಕ್‍ನಲ್ಲಿ ಶೋಭಾ ಕರಂದ್ಲಾಜೆ ಅವರು ಸ್ಯಾಲರಿ ಅಕೌಂಟ್ ಹೊಂದಿದ್ದಾರೆ. ಈ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು 2018ರ ಡಿಸೆಂಬರ್ ನಿಂದ ನಿರಂತರವಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಣ ಡ್ರಾ ಮಾಡಿಕೊಳ್ಳುವುದು ಶೋಭಾ ಕರಂದ್ಲಾಜೆ ಅವರಿಗೆ ತಿಳಿಯದಂತೆ ಕೈಚಳಕ ತೋರಿದ್ದಾರೆ.
Advertisement
Advertisement
ಶೋಭಾ ಕರಂದ್ಲಾಜೆ ಅವರು ಪಾಸ್‍ಬುಕ್ ಎಂಟ್ರಿ ಮಾಡಿಸಲು ಇತ್ತೀಚೆಗೆ ಬ್ಯಾಂಕ್‍ಗೆ ಹೋಗಿದ್ದಾಗ ಹಣ ಡ್ರಾ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ. ಭಾರೀ ಪ್ರಮಾಣದ ಮೊತ್ತವನ್ನು ಕಳೆದುಕೊಂಡ ಅವರು ಕೇಂದ್ರ ಸಚಿವರ ಮುಂದೆ ಅಳಲು ತೊಡಿಕೊಂಡಿದ್ದಾರೆ. ಹೀಗಾಗಿ ಖದೀಮರ ಪತ್ತೆಗಾಗಿ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ತನಿಖೆಗೆ ಮುಗಿಯುವವರೆಗೂ ಅಕೌಂಟ್ ಹ್ಯಾಕ್ ಆಗಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಈ ಕುರಿತು ಶೋಭಾ ಕರಂದ್ಲಾಜೆ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾತೆ ಹ್ಯಾಕ್ ಆಗಿರುವ ಕುರಿತು ಒಪ್ಪಿಕೊಂಡಿರುವ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv