ಗದಗ: ಶೋಭಾ ಕರಂದ್ಲಾಜೆ (Shobha Karandlaje) ಸತ್ಯ ಹೇಳುವುದು ತೀರಾ ಕಡಿಮೆ. ಈ ಪ್ರಕರಣದಲ್ಲಿ ಯಾರಿದ್ದಾರೆ ಅವರ ಹೇಳಿಕೆ ತೆಗೆದುಕೊಳ್ಳಲಾಗಿದೆ ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ (H.K.Patil) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಿರಗೇಟು ನೀಡಿದ್ದಾರೆ.
ಉಡುಪಿ (Udupi) ವಿಡಿಯೋ (Video) ಚಿತ್ರೀಕರಣದ ಕುರಿತು ನಗರದ ಬಿಂಕದಕಟ್ಟೆ ಮೃಗಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಪ್ರಕಾರ ವರ್ಷದಿಂದ ತಂತ್ರಗಾರಿಕೆ ನಡೆಯುತ್ತಿದ್ದರೆ ಆಗ ನೀವು ಏನು ಮಾಡ್ತಿದ್ರಿ? ಒಂದು ವರ್ಷ ನಿಮ್ಮದೇ ಸರ್ಕಾರ ಇದ್ದರೂ ಯಾಕೆ ಸುಮ್ಮನಿದ್ರಿ? ಇಂಟಲಿಜೆನ್ಸ್, ಪೊಲೀಸ್ ಇಲಾಖೆ ನಿಮ್ಮ ಕೈಯಲ್ಲಿ ಇತ್ತಲ್ವಾ? ಯಾಕೆ ಸುಮ್ಮನಿದ್ರಿ? ನಾವು ಬಂದು ಎರಡು ತಿಂಗಳಲ್ಲಿ ಎಲ್ಲಾ ಪತ್ತೆ ಮಾಡಿದೆವು. ಸಣ್ಣ ವಯಸ್ಸಿನವರ ಇಂತಹ ನಗೆಪಾಟಲಿಗೆ ಸಮಾಜ ಒಪ್ಪಲ್ಲ, ಯಾರೂ ಒಪ್ಪಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಪ್ರದೀಪ್ ಈಶ್ವರ್ Vs ಸುಧಾಕರ್ ಟಾಕ್‍ಫೈಟ್ – ಹಾಲಿ, ಮಾಜಿ ಶಾಸಕರ ಬೆಂಬಲಿಗರ ವಿರುದ್ದ ಎಫ್‌ಐಆರ್ ದಾಖಲು
Advertisement
Advertisement
ಗ್ಯಾರಂಟಿ ಯೋಜನೆಗಳ (Guarantee Scheme) ಮೂಲಕ ಮತದಾರರಿಗೆ ಆಮಿಷ ಆರೋಪಕ್ಕೆ ಸಿಎಂಗೆ ಹೈಕೋರ್ಟ್ (High Court) ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಬಗ್ಗೆ ನಮಗೂ ಅರ್ಜಿ ಬಂದಿದೆ. ಗ್ಯಾರಂಟಿ, ವಚನ ಕೊಡುವುದು, ಮಾತು ಕೊಡುವುದು ಚುನಾವಣೆಯಲ್ಲಿ ವಿಶೇಷವಾದದ್ದು. ಚುನಾವಣೆ ಆಯೋಗದವರು ಕ್ರಮ ತೆಗೆದುಕೊಳ್ಳುವುದಾದರೇ ಮೊದಲು ಧರ್ಮ, ಜಾತಿ ಹೆಸರಿನ ಮೇಲೆ ಹಣ ಪೋಲು ಮಾಡುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ. ಚುನಾವಣೆಗಳ ಬಗ್ಗೆ ಗಂಭೀರವಾದ ಆಲೋಚನೆ, ಏನು ಕ್ರಮ ತೆಗೆದುಕೊಳ್ಳಬೇಕು ಅದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೈವಿಕ ತಂತ್ರಜ್ಞಾನ ನೀತಿ ಅಳವಡಿಕೆಯಿಂದ ಜೈವಿಕ ತಂತ್ರಜ್ಞಾನ ಕ್ಞೇತ್ರ ಅಭಿವೃದ್ಧಿ: ಪ್ರಿಯಾಂಕ್ ಖರ್ಗೆ
Advertisement
Advertisement
ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ ಅಸೂಟಿ, ಅಶೋಕ ಮಂದಾಲಿ, ಫಾರುಕ್ ಹುಬ್ಬಳ್ಳಿ, ಪ್ರಭು ಬುರಬುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಲೋಕಸಭೆ ಎಲೆಕ್ಷನ್‍ಗೆ ಹೊಸ ಟೀಂ ಕಟ್ಟಿದ ಬಿಜೆಪಿ – ಕಮಲಕ್ಕೆ ರವಿ ಸಾರಥಿ?
Web Stories