ಬೆಂಗಳೂರು: ಕರ್ನಾಟಕ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ತಮ್ಮ ಕರ್ತವ್ಯದಲ್ಲಿ ಭ್ರಷ್ಟರ ಪಾಲಿನ ಸಿಂಹ ಸ್ವಪ್ನವಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಮಧುಕರ ಶೆಟ್ಟಿ ನಮ್ಮ ಜಿಲ್ಲೆಯವರು. ಶೃಂಗೇರಿಯಲ್ಲಿ ನಕ್ಸಲರ ವಿರುದ್ಧ ಉತ್ತಮ ಕೆಲಸ ಮಾಡಿ, ನಕ್ಸಲರನ್ನ ಪತ್ತೆ ಹಚ್ಚೋಕೆ ಸಾಕಷ್ಟು ಶ್ರಮ ವಹಿಸಿದ್ದರು. ಅಲ್ಲದೇ ಲೋಕಾಯುಕ್ತದಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದರು ಎಂದು ತಿಳಿಸಿದರು.
Advertisement
Advertisement
ಮಧುಕರ ಶೆಟ್ಟಿ ಅವರ ಸಾವು ಶ್ವಾಸಕೋಶದ ಅಥವಾ ಹೆಚ್1ಎನ್1 ನಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಆದರೆ ಪ್ರಾಮಾಣಿಕರಾಗಿದ್ದ ಅವರ ಸಾವಿನ ಸುದ್ದಿ ನಮಗೆ ದಿಗ್ಭ್ರಮೆ ಮೂಡಿಸಿದೆ. 47 ವರ್ಷಕ್ಕೆ ಅವರು ನಿಗೂಢವಾಗಿ ಸಾವನ್ನಪ್ಪಿರುವುದು ನಮಗೂ ಕೂಡ ಭಯ ಉಂಟಾಗುವಂತೆ ಮಾಡಿದೆ ಎಂದರು. ಇದನ್ನು ಓದಿ: ಸಿಂಗಂ ಸಾವಿನ ಬಗ್ಗೆ ಅನುಮಾನಕ್ಕೆ ಕಾರಣಗಳು ಇಲ್ಲಿವೆ
Advertisement
ಇದೇ ವೇಳೆ ಮಧುಕರ್ ಶೆಟ್ಟಿ ಅವರ ಸಾವಿನ ಬಗ್ಗೆ ವ್ಯಕ್ತವಾಗಿರುವ ಸಂಶಯದ ಬಗ್ಗೆ ಪ್ರತಿಕ್ರಿಯೆ ನೀಡಿ, ಅನಾರೋಗ್ಯದಿಂದ ಅವರು ಸಾವನ್ನಪ್ಪಿದ್ರಾ? ಅಥವಾ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ರಾ ಎಂಬುವುದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಸರ್ಕಾರಗಳ ಕೆಲ ವರ್ತನೆಗಳಿಂದ ಅವರು ಬೇಸಗೊಂಡಿದ್ದರು. ಹೀಗಾಗಿ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದರು. ಅವರ ಸಾವಿಗೆ ನಕ್ಸಲರು ಕಾರಣ ಅಂತ ಹೇಳಲು ಈಗಲೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಸೂಕ್ತ ತನಿಖೆಯ ಬಳಿಕೆ ಸತ್ಯಾಂಶ ಗೊತ್ತಾಗಬೇಕು ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv