ಬೀದರ್: ಕಳ್ಳತನ ಮಾಡುವವರಿಗೆ ಅದರ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ (Rahul Gandhi) ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ ಬಗ್ಗೆ ಎಲ್ಲ ತಿಳಿಯುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಹೆಸರು ಡಿಲೀಟ್, ರಾಹುಲ್ ಗಾಂಧಿ ಆರೋಪದ ಬಗ್ಗೆ ಮಾತನಾಡಿದ ಅವರು, ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯಜ್ಞಾನ ಇಲ್ಲ. ಕಳ್ಳತನ ಮಾಡುವವರಿಗೆ ಕಳ್ಳತನದ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ತಪಾಸಣೆ ಮಾಡಿದ್ರೆ ಮತಗಳ್ಳತನದ (Vote Theft) ಬಗ್ಗೆ ಎಲ್ಲ ತಿಳಿಯುತ್ತದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ – 29 ದಿನಗಳಲ್ಲಿ 1.70 ಕೋಟಿ ಸಂಗ್ರಹ
ಮಾಲೂರು ಕಾಂಗ್ರೆಸ್ (Congress) ಶಾಸಕರನ್ನ ಕೋರ್ಟ್ ಅಸಿಂಧೂಗೊಳಿಸಿದ್ದು ಯಾಕೆ? ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮೋಸ ಮಾಡಿದವರು ಯಾರು? ಕಾಂಗ್ರೆಸ್ ಮೋಸ ಮಾಡಿ 135 ಸ್ಥಾನ ಗೆದ್ದವರು. ಆಳಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿನೇ ಗೆದ್ದಿದ್ದು. ಸಿದ್ದರಾಮಯ್ಯರ ಕ್ಷೇತ್ರದಲ್ಲೂ ಮನೆ ನಂ. ಸೊನ್ನೆ ಅಂತಲೇ ತೋರಿಸುತ್ತದೆ. 20-25ರ ಮತದಾರರ ಪಟ್ಟಿ ನೋಡಿದ್ರೆ ಈಗಲೂ ಸೊನ್ನೆ ಅಂತಲೇ ಮನೆ ನಂ. ಇದೆ. ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಅಂತ ಮಾಡಿರುತ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲ, ಡಾಟಾ ಆಪರೇಟರ್ ಸರಿಯಾಗಿ ಫೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದ್ರೆ ತೊಗೊಳಲ್ಲ. ಆಗ ಸೊನ್ನೆ ಹಾಕ್ತಾರೆ ಎಂದರು.
ರಾಜ್ಯ ಕಾಂಗ್ರೆಸ್ ಸದ್ಯ ಬರ್ಬಾದ್ ಆಗಿದೆ. ಯಾವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ, ಎಲ್ಲಾ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುತ್ತಿವೆ, ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಬಳಿ ಹಣವಿಲ್ಲ ಎಂದು ಲೇವಡಿ ಮಾಡಿದರು.
ಇನ್ನೂ ಜಾತಿಗಣತಿ ಮೂಲಕ ಸಿಎಂ ಹೊಡೆದಾಡುವ ನೀತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2013ರಲ್ಲಿ ಲಿಂಗಾಯತರು ಮತ್ತು ವೀರಶೈವರನ್ನ ಒಡೆಯುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡಿದರು. ಈಗ ಮತ್ತೆ ಎಲ್ಲಾ ಜಾತಿ, ಉಪಜಾತಿಗಳನ್ನು ಒಡೆಯಲು ಹೊರಟಿದ್ದು, ಒಕ್ಕಲಿಗ, ಲಿಂಗಾಯತ, ಗಾಣಿಗ ಸೇರಿದಂತೆ ಎಲ್ಲವನ್ನು ಕ್ರಿಶ್ಚಿಯನ್ ಎಂದು ಬರೆಸುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ:‘ಹೂವಿನ ಬಾಣದಂತೆ..’ ವೈರಲ್ ಹುಡುಗಿ ನಿತ್ಯಶ್ರೀ ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?