ಬೆಂಗಳೂರು: ಚಿಕ್ಕಮಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಲಂಬಾಣಿ ಸಮುದಾಯದ ಮಹಿಳೆಯರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗ ನೃತ್ಯ ಮಾಡಿದ್ದರು. ಶೋಭಾ ಕರಂದ್ಲಾಜೆ ಮತ್ತು ಮತ್ತು ಭಾರತಿ ಶೆಟ್ಟಿ ಅವರು ನೃತ್ಯ ಮಾಡಿ ಸಾಥ್ ನೀಡಿದ್ದರು.
Advertisement
ಈ ವೇಳೆ ಲಂಬಾಣಿ ನೃತ್ಯದ ಮೂಲಕ ಬಿಎಸ್ ಯಡಿಯೂರಪ್ಪನವರಿಗೆ ಲಂಬಾಣಿ ಸಮುದಾಯದ ಮಹಿಳೆಯರು ಸ್ವಾಗತ ನೀಡಿದರು. ಬಿಎಸ್‍ವೈ ಅವರ ಕಾಲಿಗೆ ಲಂಬಾಣಿ ಸಮುದಾಯದ ಮಹಿಳೆಯರು ನಮಸ್ಕರಿಸಿದರು. ಲಂಬಾಣಿ ನ್ಯತ್ಯ ಮಾಡಿದ ಮಹಿಳೆಯರಿಗೆ ಬಿಎಸ್‍ವೈ 2 ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು.