ಬೆಂಗಳೂರು: ಪಾಕಿಸ್ತಾನದ ಬಂಡವಾಳವನ್ನು ವಿದೇಶದಲ್ಲಿ ಬೆತ್ತಲೆ ಮಾಡಲು, ಕೇಸ್ ಇರೋ ನಾಸೀರ್ ಹುಸೇನ್‌ರನ್ನ ಸಂಸತ್ ನಿಯೋಗದಲ್ಲಿ ಸೇರಿಸೋಕೆ ಆಗುತ್ತಾ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.
ಸಂಸತ್ ನಿಯೋಗದಿಂದ ನಾಸೀರ್ ಹುಸೇನ್(Nasir Hussain) ಹೆಸರು ಕೇಂದ್ರ ಕೈ ಬಿಟ್ಟಿರೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ನಾಸೀರ್ ಹುಸೇನ್? ರಾಜ್ಯಸಭೆ ಸದಸ್ಯರಾಗೋವಾಗ ನಾಸೀರ್ ಹುಸೇನ್ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರು. ಅಂತಹ ಮಾನಸಿಕತೆ ಇರೋರನ್ನ ವಿದೇಶಕ್ಕೆ ಕಳಿಸಬೇಕಾ? ಅವರ ನಾಯಕ ರಾಹುಲ್ ಗಾಂಧಿ(Rahul Gandhi) ವಿದೇಶದಲ್ಲಿ ಭಾರತದ ವಿರುದ್ಧ ಮಾತಾಡೋ ಹಾಗೆ ನಾಸೀರ್ ಹುಸೇನ್ ಮಾತಾಡಬಹುದು. ಅಲ್ಲಿ ಹೋಗಿ ದೇಶದ ವಿರೋಧ ಮಾತನಾಡಲ್ಲ ಎಂದು ಏನು ಗ್ಯಾರಂಟಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ
ನಾಸೀರ್ ಹುಸೇನ್ ಮೇಲೆ ಕೇಸ್ ಇದೆ. ನಾನೇ ಗೃಹ ಸಚಿವರಿಗೆ ಪಾಕಿಸ್ತಾನ ಜಿಂದಾಬಾದ್ ಕೂಗಿರೋ ಪ್ರಕರಣದಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಇದ್ದಾರೆ ಅಂತ ಹೇಳಿದ್ದೇನೆ. ಅಂತಹವರನ್ನು ವಿದೇಶದ ಪ್ರವಾಸಕ್ಕೆ ಕಳಿಸಬೇಕಾ? ಕಾಂಗ್ರೆಸ್(Congress) ದಿವಾಳಿ ಆಗಿದ್ಯಾ? ನಾಸೀರ್ ಹುಸೇನ್ ಬಿಟ್ಟು ಬೇರೆ ಹೆಸರು ಇಲ್ವಾ? ಇದು ಕಾಂಗ್ರೆಸ್‌ನ ದಿವಾಳಿತನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.