ಬೆಂಗಳೂರು: ಇಂದಿನ ಬಜೆಟ್ ದೇಶಕ್ಕೆ ಮುಂದಿನ ದಿಕ್ಸೂಚಿಯಾಗಿದೆ. ಸಂಕಷ್ಟ ಸಂದರ್ಭದಲ್ಲೂ ಉತ್ತಮ ಜಿಎಸ್‍ಟಿ ಸಂಗ್ರಹವಾಗಿದೆ. ಅತ್ಯುತ್ತಮ ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 23 ಸಾವಿರ ಕೋಟಿ ಹಿಂದೆ ಕಾಂಗ್ರೆಸ್ ಮೀಸಲಿಟ್ಟಿತ್ತು. ಇಂದು ಮೋದಿ ಸರ್ಕಾರ 1.32 ಲಕ್ಷ ಕೋಟಿ ರೈತರಿಗೆ ಮೀಸಲಿಟ್ಟಿದೆ. 2023 ಅಂತರಾಷ್ಟ್ರೀಯ ಸಿರಿ ಧಾನ್ಯಗಳ ಮೇಳ ಆಯೋಜಿಸಿದೆ. ಸಿರಿ ಧಾನ್ಯಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಹಾಗೂ ಎಸ್ಸಿ ಎಸ್ಟಿಗಳಿಗೆ ಆದ್ಯತೆ ನೀಡಿದೆ ಎಂದು ಇಂದಿನ ಬಜೆಟನ್ ಹಾಡಿ ಹೋಗಳಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ: ತೇಜಸ್ವಿ ಸೂರ್ಯ
Advertisement
#Budget2022 steers India’s Agri-Sector towards modernism, gives momentum to sustainable agri-practices &taps under-explored potential of farming.
Centred around Farmers’ Welfare, implies how the interposition of private players can reshape agriculture.#AtmaNirbharBharatKaBudget pic.twitter.com/Ax1pMqVRH8
— Shobha Karandlaje (@ShobhaBJP) February 1, 2022
Advertisement
ಕೃಷಿಯನ್ನು ಖುಷಿಯಿಂದ ಮಾಡುವಂತೆ ಮೋದಿ ಮಾಡಿದ್ದಾರೆ. ಬಾಯಿಂದ ಮಾತ್ರವಲ್ಲ ಬಜೆಟ್ ರೂಪದಲ್ಲಿ ರೈತರ ಪರವಾಗಿ ಸರ್ಕಾರ ನಿಂತಿದೆ. ನದಿ ನೀರು ಹಂಚಿಕೆ ಸಮಸ್ಯೆ ಇರುವ ಹೊತ್ತಲ್ಲಿ ನದಿ ಜೋಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ನೀರಿಲ್ಲದ ಬರಡು ಪ್ರದೇಶಕ್ಕೆ ನೀರು ಕೊಡುವ ಪ್ರಯತ್ನ ಮಾಡಿದೆ. ರೈಲ್ವೆ, ಸಾರಿಗೆ ಸೇರಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರಗಳನ್ನು ಜೊತೆಗೂಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಒಯ್ಯುವ ಕೆಲಸ ಮಾಡಲಾಗುತ್ತಿದೆ. ಈ ಬಜೆಟ್ ಖುಷಿ ತಂದಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ