ಬೆಂಗಳೂರು: ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಬಿಜೆಪಿಯ ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ ನೀಡಿದೆ.
ಕರ್ನಾಟಕ ಬಿಜೆಪಿ ಜನವಿರೋಧಿ ಸರ್ಕಾರ, ಮೂರು ಭಾಗ್ಯ, ವಿಫಲ ಸರ್ಕಾರದ ಹೆಸರಲ್ಲಿ ಜಾಹೀರಾತು ತಯಾರಿಸಿತ್ತು. ಈ ಜಾಹೀರಾತಿನ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಉಗ್ರಪ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮೂರು ಜಾಹೀರಾತನ್ನು ಪ್ರಸಾರ ಮಾಡದಂತೆ ತಡೆ ನೀಡಿದೆ.
Advertisement
ಈ ಆದೇಶಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಜಾಹೀರಾತುಗಳಿಗೆ ಆಯೋಗದ ಅನುಮತಿ ಪಡೆದಿದ್ದೇವೆ. ಉಗ್ರಪ್ಪನವರಿಗೆ ಬಿಜೆಪಿ ಜಾಹೀರಾತಿನ ಮೇಲೆ ಹೊಟ್ಟೆ ಉರಿಯಾಗಿದ್ದು. ಅದಕ್ಕೆ ದೂರು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
Advertisement
ಚುನಾವಣಾ ಆಯೋಗ ಅನುಮತಿ ನೀಡಿ, ಕೆಲ ಬದಲಾವಣೆಗಳನ್ನ ಹೇಳಿ ಈಗ ತಡೆ ಕೊಟ್ಟಿರುವುದು ಸರಿಯಲ್ಲ. ಚುನಾವಣಾ ಆಯೋಗ ಜಾಹಿರಾತುಗಳನ್ನು ಮರು ಪರಿಶೀಲನೆ ಮಾಡಬೇಕು. ಏಕಪಕ್ಷೀಯ ನಿರ್ಧಾರದಂತೆ ಕಾಣಿಸುತ್ತಿದೆ. ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳಬಾರದು. ತಡೆ ನೀಡಿದ ಆದೇಶವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.