ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ

Public TV
2 Min Read
SHOBHA KARANDLAJE 1

– ಸಿದ್ದರಾಮಯ್ಯ ಮುಸಲ್ಮಾನರ ನಾಯಕ
– ಡಿಕೆಶಿ ಕ್ರಿಮಿನಲ್‍ಗಳ ಪರ ಇರುವ ನಾಯಕ
– ದಕ್ಷಿಣ ಕರ್ನಾಟಕದಲ್ಲಿ ನಡೆದಾಡಲು ಭಯ ಆಗುತ್ತೆ ನಮಗೆ

ಬೆಂಗಳೂರು: ಇಮ್ರಾನ್ ಪ್ರತಾಪ್ ಗರ್ಹಿಯಾಗಿದ್ದು (Imran Pratapgarhi) ಯುಪಿ ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್ (Atiq Ahmed) ಬೆಂಬಲಿಗನಾಗಿದ್ದು, ಇಂಥವನನ್ನು ಕಾಂಗ್ರೆಸ್ (Congress) ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕ ಮಾಡಿದೆ. ಇದನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ (Shobha Karandlaje) ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಮ್ರಾನ್‍ನನ್ನು ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದೆ. ಗ್ಯಾಂಗ್‍ಸ್ಟರ್ ಕಾಯ್ದೆಯಡಿ ಬಂಧನವಾದವರ ಜತೆ ಇಮ್ರಾನ್ ಸಂಪರ್ಕ ಇದೆ. ಇಮ್ರಾನ್ ಪ್ರತಾಪ್ ಗರ್ಹಿ ಶಾಯರಿ ಬರೆಯುವವನಾಗಿದ್ದಾನೆ. ಆದರೆ ಅವನ ಶಾಯರಿಗಳು ದೇಶ, ಸಮಾಜದ ವಿರುದ್ಧ ಇವೆ. ಅಷ್ಟೇ ಅಲ್ಲದೇ ಇಮ್ರಾನ್ ಅತೀಕ್ ಅಹಮದ್‍ನನ್ನು ಗುರು ಅಂತ ಹೇಳಿ ಕೊಳ್ಳುತ್ತಿದ್ದ. ಇಂತಹ ದೇಶದ್ರೋಹಿ, ಸಮಾಜ ದ್ರೋಹಯಾದ ಇಮ್ರಾನ್‍ರಂತಹವರ ಮೇಲೆ ಕಾಂಗ್ರೆಸ್‍ಗೆ ಬಹಳ ಪ್ರೀತಿಯಿದೆ. ಅದಕ್ಕೆ ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗರ್ಹಿಯನ್ನು ಬಳಸಿಕೊಳ್ಳುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

IMRAN PRATHPGAR

ಈ ಹಿಂದೆ ಇಮ್ರಾನ್ ಕರ್ನಾಟಕಕ್ಕೆ ಬಂದು ಟಿಪ್ಪು ಪರ ಭಾಷಣ ಮಾಡಿದ್ದ. ಮುಸ್ಲಿಮರಿಗೆ ತಲೆ ತಗ್ಗಿಸಿ ಗೊತ್ತಿಲ್ಲ, ತಲೆ ಕಡಿದು ಗೊತ್ತಿದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ನಮ್ಮ ರಾಜ್ಯದ ಮುಸಲ್ಮಾನರನ್ನು ಎತ್ತಿ ಕಟ್ಟುವ ಯತ್ನ ನಡೆಸಿದ್ದ. ಇಮ್ರಾನ್ ಬಗ್ಗೆ ಕಾಂಗ್ರೆಸ್‍ಗೆ ಎಲ್ಲಾ ಗೊತ್ತಿದೆ. ಉತ್ತರ ಪ್ರದೇಶದಲ್ಲಿ ಹತ್ಯೆ ಆದ ಅತೀಕ್, ಅಶ್ರಫ್ ಜತೆ ಇಮ್ರಾನ್ ನಿಕಟವರ್ತಿ ಆಗಿದ್ದ. ಆದರೆ ಅಪರಾಧಿ ಹಾಗೂ ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಇದೆ. ಇಮ್ರಾನ್‍ನನ್ನು ಸ್ಟಾರ್ ಪ್ರಚಾರಕ ಮಾಡಿರುವ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಬೇಕು. ಕಾಂಗ್ರೆಸ್ ಉದ್ದೇಶ ಏನು? ಇಲ್ಲೂ ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತೀರಾ ಎಂದು ಪ್ರಶ್ನಿಸಿದರು.

congress

ಸಿದ್ದರಾಮಯ್ಯ (Siddaramaiah) ಟಿಪ್ಪು ಜಯಂತಿ ಆಚರಣೆ ಮಾಡಿದರು. ಆದರೆ ಯಾರೂ ಜಯಂತಿ ಮಾಡಿ ಅಂತ ಕೇಳಿರ್ಲಿಲ್ಲ. ಎಸ್‍ಡಿಪಿಐ ಕಾರ್ಯಕರ್ತರ 1,700 ಕೇಸ್ ವಾಪಸ್ ತೆಗೆದುಕೊಂಡರು. ಗೋಹತ್ಯೆಕೋರರ ಪರ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಮುಸಲ್ಮಾನರ ನಾಯಕ ಜೊತೆಗೆ ಡಿಕೆಶಿ ಕ್ರಿಮಿನಲ್‍ಗಳ ಪರ ಇರುವ ನಾಯಕ. ಕಾಂಗ್ರೆಸ್‍ನವರ ಕೈಗೆ ರಕ್ತ ಅಂಟಿದೆ. ಈ ಹಿನ್ನೆಲೆಯಲ್ಲಿ ನಮಗೆ ದಕ್ಷಿಣ ಕರ್ನಾಟಕದಲ್ಲಿ ನಡೆದಾಡಲು ಭಯ ಆಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ಅಂತಿಮ ಪಟ್ಟಿ ಬಿಡುಗಡೆ – 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರು ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲ ಇಂಥವರ ಪರ ಇದೆ. ಅಷ್ಟೇ ಅಲ್ಲದೇ ಮಂಗಳೂರು ಕುಕ್ಕರ್ ಬಾಂಬ್ ಆರೋಪಿ ನಮ್ಮ ಸೋದರ ಅಂತಾರೆ ಕಾಂಗ್ರೆಸ್‍ನವರು. ಹಾಗಾದ್ರೆ ಕಾಂಗ್ರೆಸ್‍ನವರು ಯಾರ ಪರ ಇದ್ದಾರೆ?. ಕುಕ್ಕರ್ ಬಾಂಬ್ ಭಯೋತ್ಪಾದಕ ಕೃತ್ಯ ಇಂಥವರ ಪರ ಕಾಂಗ್ರೆಸ್‍ನವರು ಇದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ : ಈಶ್ವರಪ್ಪ

Share This Article