– ಪರಮೇಶ್ವರ್ ಒಬ್ಬ ನಾಲಾಯಕ್ ಗೃಹ ಸಚಿವ
– ಉತ್ತರದಲ್ಲಿ ಪಪ್ಪು, ದಕ್ಷಿಣದಲ್ಲಿ ಟಿಪ್ಪು ಅಂತ ಲೇವಡಿ
ಬೆಂಗಳೂರು: ಕರ್ನಾಟಕದ ನವ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ(Siddaramaiah). ನವ ಟಿಪ್ಪು ಸುಲ್ತಾನ್ ದರ್ಬಾರ್ ರಾಜ್ಯದಲ್ಲಿ ನಡೀತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karndlaje) ಕಿಡಿಕಾರಿದರು.
ಬೆಂಗಳೂರಿನಲ್ಲಿ(Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮಗೆ 135 ಸೀಟ್ ಕೇವಲ ಮುಸ್ಲಿಮರಿಂದ ಬಂದಿಲ್ಲ, ಹಿಂದೂಗಳು ಸಹ ವೋಟ್ ಹಾಕಿದ್ದಾರೆ. ಹಿಂದೂಗಳ ರಕ್ಷಣೆ ಯಾರು ಮಾಡ್ತಾರೆ? ಉತ್ತರದಲ್ಲಿ ಒಬ್ಬ ಪಪ್ಪು, ದಕ್ಷಿಣದಲ್ಲಿ ಒಬ್ಬ ಟಿಪ್ಪು ಇದ್ದಾರೆ. ಅಲ್ಲಿ ಪಾಕಿಸ್ತಾನ ಪರ ಮಾತನಾಡ್ತಾರೆ. ಇಲ್ಲಿ ಒಂದು ವರ್ಗದ ಪರ ಮಾತನಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕನ್ನಡಕ್ಕೆ ಅಪಮಾನ – ಸೋನು ನಿಗಮ್ ವಿರುದ್ಧ ಮಂಡ್ಯದಲ್ಲೂ ದೂರು
ಬಿಹಾರದಲ್ಲೇ ಅಪರಾಧ ಸಂಖ್ಯೆಗಳು ಕಮ್ಮಿಯಾಗ್ತಿವೆ. ಆದ್ರೆ ನಮ್ಮ ರಾಜ್ಯದಲ್ಲಿ ಹೆಚ್ಚಾಗ್ತಿವೆ. ಪಿಎಫ್‌ಐ, ಕೆಎಫ್‌ಡಿಗಳಂಥ ಸಂಘಟನೆ ಕಾರ್ಯಕರ್ತರ ಕೇಸ್‌ಗಳ ವಾಪಸ್, ಮುಸ್ಲಿಂ ಓಲೈಕೆಗಳೇ ಇದಕ್ಕೆ ಕಾರಣ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಕ್ರೈಂ ರೇಟ್ ಹೆಚ್ಚಾಗುತ್ತದೆ. ಉಗ್ರರನ್ನು, ಠಾಣೆಗೆ ಬೆಂಕಿ ಹಾಕಿದವರನ್ನು ಫ್ರೀಯಾಗಿ ರಸ್ತೇಲಿ ಓಡಾಡಲು ಸಿಎಂ ಅವಕಾಶ ಕೊಟ್ಟರು. ಇದರ ಪರಿಣಾಮ ಕಳೆದ ಸಲ ನಾವು 23 ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡೆವು. ರುದ್ರೇಶ್ ಹಾಗೂ ಪ್ರವೀಣ್ ನೆಟ್ಟಾರು ಕೇಸ್‌ಗಳ ತನಿಖೆಯನ್ನ ಎನ್‌ಐಎ ಮಾಡ್ತಿದೆ. ಇದರಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಕೃತ್ಯ ಮಾಡಿದವರು ಸಿಕ್ಕಿ ಹಾಕಿಕೊಂಡರು. ಉಗ್ರರಿಗೆ ಕುಮ್ಮಕ್ಕು ಕೊಡ್ತಿದ್ದವರು ಸಿಕ್ಕಿ ಹಾಕಿಕೊಂಡಿದ್ದು, ಅವ್ರು ಇವತ್ತು ಜೈಲಿನಲ್ಲಿದ್ದಾರೆ ಎಂದರು. ಇದನ್ನೂ ಓದಿ: ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್
ಇದರಿಂದ ಕೇಂದ್ರ ಸರ್ಕಾರಕ್ಕೆ ಬಲವಾದ ಆಧಾರ ಸಹ ಸಿಕ್ಕಿತು. ಪಿಎಫ್‌ಐ ನಿಷೇಧ ಮಾಡಲು ಸರಿಯಾದ ದಾಖಲೆ ಸಿಕ್ತಿರಲಿಲ್ಲ. ಆದರೆ ಪ್ರವೀಣ್ ನೆಟ್ಟಾರು ಕೇಸ್‌ನಲ್ಲಿ ಪಿಎಫ್‌ಐ ವಿರುದ್ಧ ಬಲವಾದ ಸಾಕ್ಷ್ಯ ಸಿಕ್ಕಿತ್ತು. ಇದರ ಪರಿಣಾಮ ಕೇಂದ್ರವು ಪಿಎಫ್‌ಐ ನಿಷೇಧ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: 100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್
ಸಿದ್ದರಾಮಯ್ಯ ನಡೆಯಿಂದಾಗಿ ಪಿಎಫ್‌ಐ ಮಾಜಿ ಸದಸ್ಯರು ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. 2014ರಿಂದ ಸಿದ್ದರಾಮಯ್ಯ ಮಾನಸಿಕವಾಗಿ ಟಿಪ್ಪು ಸುಲ್ತಾನ್(Tippu Sulthan) ಆಗಿ ಬದಲಾಗ್ತಿದ್ದಾರೆ. ಇದರ ಪರಿಣಾಮ ಹಿಂದೂ ಯುವಕರ ಹತ್ಯೆ ಆಗ್ತಿದೆ. ಸುಹಾಸ್ ಶೆಟ್ಟಿಯನ್ನು(Suhas Shetty) ರೌಡಿಶೀಟರ್ ಅಂತ ಸರ್ಕಾರ ಬಿಂಬಿಸಿದೆ. ಸುಹಾಸ್ ಹತ್ಯೆ ಆಗೋದು ಬಜ್ಪೆ ಠಾಣೆ ಪೊಲೀಸರಿಗೆ ಗೊತ್ತಿದ್ರೂ ಕ್ರಮ ತೆಗೊಳ್ಳಲಿಲ್ಲ. ಪರಿಣಾಮ ಸುಹಾಸ್ ಶೆಟ್ಟಿಯನ್ನು ಕೊಚ್ಚಿ ಕೊಚ್ಚಿ ಕೊಂದರು ಎಂದು ಕಿಡಿಕಾರಿದರು. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅಂಕಪಟ್ಟಿ ಗೋಲ್‌ಮಾಲ್: ಛಲವಾದಿ ನಾರಾಯಣಸ್ವಾಮಿ ಆರೋಪ
ಪರಮೇಶ್ವರ್(Parameshwar) ಒಬ್ಬ ನಾಲಾಯಕ್ ಗೃಹ ಸಚಿವ. ಅವರಿಗೆ ಇಲಾಖೆ ನಿಭಾಯಿಸಲು ಶಕ್ತಿ ಇಲ್ಲ. ರಾಜ್ಯದ ಜನರನ್ನ ರಕ್ಷಣೆ ಮಾಡಲು ಆದರೆ ಪರಮೇಶ್ವರ್ ಇರಲಿ. ಇಲ್ಲದಿದ್ರೆ ಗೃಹ ಇಲಾಖೆಗೆ ರಾಜೀನಾಮೆ ಕೊಟ್ಟು ಪರಮೇಶ್ವರ್ ಬೇರೆ ಇಲಾಖೆ ತಗೊಳ್ಳಲಿ. ಸಿದ್ದರಾಮಯ್ಯ ಅವರು ಪರಮೇಶ್ವರ್ ರಾಜೀನಾಮೆ ಪಡೆದು, ತಾವೇ ಗೃಹ ಇಲಾಖೆ ನಿಭಾಯಸಲಿ ಆಕ್ರೋಶ ಹೊರಹಾಕಿದರು.