ಉಡುಪಿ: ರಾಹುಲ್ ಗಾಂಧಿ (Rahul Gandhi) ಬಾರಾಮುಲ್ಲಾಕ್ಕೆ ಹೋದರೆ ಜನ ಹಿಡಿದುಕೊಂಡು ಹೊಡೆಯುತ್ತಾರೆ. ನಾನು ಹೆಣ್ಮಗಳು ಬಾರಾಮುಲ್ಲಾಕ್ಕೆ ಹೋಗಿದ್ದೇನೆ. ತಾಕತ್ ಇದ್ದರೆ ನೀವು ಹೋಗಿ ನೋಡೋಣ ಅಂತ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲೊಡ್ಡಿದ್ದಾರೆ.
ಉಡುಪಿಯ (Udupi) ಕಾಪುವಲ್ಲಿ ಬಿಜೆಪಿ (BJP) ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಹುಲ್ ಭಾರತ್ ಜೋಡೋ ಯಾತ್ರೆ (Bharat Jodo Yatra) ಆಗಬೇಕಾಗಿದ್ದು ದೇಶದ ಗಡಿಯಲ್ಲಿ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ (Congress) ಭಾರತವನ್ನು ಒಡೆದು ಮೂರು ದೇಶಗಳಿಗೆ ಕೊಟ್ಟಿದೆ. ಪಾಕಿಸ್ತಾನ, ಚೀನಾ, ಬಾಂಗ್ಲಾಕ್ಕೆ ಬಿಟ್ಟುಕೊಟ್ಟ ಜಾಗದಲ್ಲಿ ಜೋಡೋ ಮಾಡಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವ್ರಿಂದ ಜೆಡಿಎಸ್ ಮುಕ್ತ ಮಾಡಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
Advertisement
Advertisement
ಪಿಒಕೆಯಲ್ಲಿ, ಚೀನಾ ಗಡಿಯಲ್ಲಿ, ಬಾಂಗ್ಲಾ ಗಡಿಯಲ್ಲಿ ರಾಹುಲ್ ಜೋಡೋ ಯಾತ್ರೆ ಮಾಡಬೇಕು. ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಅಸ್ತಿತ್ವ ಇಲ್ಲ. ನಾನು ಹೆಣ್ಮಗಳು ದೇಶದ ಗಡಿ ಬಾರಾಮುಲ್ಲಾಕ್ಕೆ ಹೋಗಿದ್ದೇನೆ. ನೀವು ಬಾರಾಮುಲ್ಲಾಕ್ಕೆ ಹೋದರೆ ನಿಮ್ಮನ್ನು ಜನ ಹಿಡಿದುಕೊಂಡು ಹೊಡೆಯುತ್ತಾರೆ. ಅದಕ್ಕೆ ನಿಮ್ಮ ಸರ್ಕಾರವೇ ಕಾರಣ. ತಾಕತ್ ಇದ್ದರೆ ರಾಹುಲ್ ಗಾಂಧಿ ಬಾರಾಮುಲ್ಲಾ, ಮೂರು ದೇಶದ ಗಡಿಯಲ್ಲಿ ಜೋಡೋ ಯಾತ್ರೆ ಮಾಡಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಸಿದ್ದರಾಮಯ್ಯ ಸರ್ಕಾರ ಅಂದು ಧರ್ಮ ಜಾತಿ ಒಡೆದಾಳುವ ನೀತಿ ಮಾಡಿದೆ. ರಾಜ್ಯ ಒಡೆಯುವ ಷಡ್ಯಂತ್ರ ಮಾಡಿದ್ದು ಕಾಂಗ್ರೆಸ್. ಸಿದ್ದು, ಡಿಕೆ, ಖರ್ಗೆ ಮೊದಲು ನಿಮ್ಮ ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನೀವು ದೇಶ ಸರಿ ಮಾಡಲು ಸಮರ್ಥವಾಗಿಲ್ಲ. ಮೋದಿಯಂತಹ ನೇತೃತ್ವ ಇನ್ನೊಮ್ಮೆ ಸಿಗಲು ಸಾಧ್ಯವಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಡಿಕೆಶಿಯವರೇ ನೀವು ಸಿಎಂ ಆಗೋದು ಡೌಟ್, BJPಗೆ ಬಂದುಬಿಡಿ- ಮುನಿರತ್ನ ಆಹ್ವಾನ