ವಿಜಯಪುರ: ಸಿ.ಟಿ ರವಿ ಟಿಕೆಟ್ ಅಪೇಕ್ಷೆ ತಪ್ಪಲ್ಲ, ಆದರೆ ಅವಮಾನ ಮಾಡಿ ಟಿಕೆಟ್ ಕೇಳಬಾರದು. ಸೋಲನ್ನು ಇನ್ನೊಬ್ಬರ ಮೇಲೆ ಹೊರಿಸಬಾರದು. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ. ಒಂದು ಗುಂಪು ಮಾತ್ರ ವಿರೋಧ ಮಾಡ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು.
ಟಿಕೆಟ್ ಗೊಂದಲ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಟಿಕೆಟ್ ವಿಚಾರದಲ್ಲಿ ಗೊಂದಲ ಇರೋದು ನಿಜ. ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ. ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಬಹುದು. ಹೀಗಾಗಿ ಬೇರೆಯವರು ಟಿಕೆಟ್ ಕೇಳ್ತಿದ್ದಾರೆ. ನನಗೆ ಎರಡು ಬಾರಿ ಟಿಕೆಟ್ ಕೊಟ್ಟಿದ್ದಾರೆ. ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೆಟ್ ಕೇಳಬಾರದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ತಮ್ಮ ವಿರೋಧಿಗಳ ವಿರುದ್ಧ ಕಿಡಿಕಾರಿದರು.
Advertisement
ಟಿಕೆಟ್ ತೆಗೆದುಕೊಳ್ಳಲು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ. ಸಿ.ಟಿ ರವಿ (CT Ravi) ಅವರು ಟಿಕೆಟ್ ಗೆ ಅಪೇಕ್ಷೆ ಪಟ್ಟರೂ ತಪ್ಪಲ್ಲ. ಸಿ.ಟಿ ರವಿ ಟಿಕೆಟ್ ಕೇಳಿರೋದು ನಿಜ. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ, ಒಂದು ಗುಂಪು ವಿರೋಧ ಮಾಡ್ತಿದೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಬೇಸರ ಹೊರಹಾಕಿದರು.
Advertisement
Advertisement
ಈ ಬಾರಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ (BJP) ಗೆಲ್ಲಲಿದೆ. ಮತದಾರರು ಮೋದಿಯವರನ್ನ (Narendra Modi) ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತೇವೆ. ನಮ್ಮ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಆಧಾರದ ಮೇಲೆ ವೋಟು ಕೇಳುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದರು.
Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ (Vidhanasabha Elections) ಸ್ವಪಕ್ಷೀಯರ ವಿರುದ್ಧ ತಾವು ಕೆಲಸ ಮಾಡಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಹೆತ್ತತಾಯಿಗೆ ದ್ರೋಹ ಮಾಡಲ್ಲ, ನಾನು ಹಿಂದೆ ಯಾರಿಗೂ ವಿರೋಧ ಮಾಡಿಲ್ಲ. ತಮ್ಮ ಸೋಲನ್ನ ಇನ್ನೊಬ್ಬರ ಮೇಲೆ ಹೊರಿಸಬಾರದು ಎಂದು ಪರೋಕ್ಷವಾಗಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದರು. ಅಲ್ಲದೆ ಆ ರೀತಿ ನಾನು ಮಾಡಿದ್ರೆ ಅದು ತಾಯಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಡಗಿಯಲ್ಲಿ ಮೆಣಸಿನಕಾಯಿ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ವಿರುದ್ಧ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೃಷಿಕರನ್ನ ಮರೆತಿದೆ. ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಗ್ಯಾರಂಟಿ ಕೊಟ್ಟು ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ. ರಾಜ್ಯ ಪ್ರಪೋಸಲ್ ಕಳಿಸಬೇಕು ಕಳಿಸ್ತಿಲ್ಲ. ಕೇಂದ್ರ ರೈತರ ಬೆನ್ನೆಲುಬಾಗಿ ನಿಲ್ಲಲು ರೆಡಿ ಇದೆ. ನಾವು ಕೋಲ್ಡ್ ಸ್ಟೋರೆಜ್ ಮಾಡಿಕೊಳ್ಳಲು ಒಂದು ಲಕ್ಷ ಕೋಟಿ ಇಟ್ಟಿದ್ದೇವೆ. ಇದಕ್ಕಾಗಿ ಯಾರು ಪ್ರಪೋಸಲ್ ಸಲ್ಲಿಕೆ ಮಾಡಿದ್ದಾರೆ? ರಾಜ್ಯದಿಂದ ಪ್ರಪೋಸಲ್ ಬರ್ತಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕೇವಲ ಗ್ಯಾರಂಟಿಗಳ ಬೆನ್ನು ಬಿದ್ದಿದ್ದಾರೆ. ಸಿಎಂಗೆ ಆಸಕ್ತಿ ಇದೆಯಾ? ಡಿಸಿಎಂಗೆ ಆಸಕ್ತಿ ಇದೆಯಾ? ಇದು ರಾಜ್ಯ ಸರ್ಕಾರದ ವೈಫಲ್ಯ ಇದೆ ಎಂದು ಕಿಡಿಕಾರಿದರು.
ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ. ತಮಿಳುನಾಡಿಗೆ (Tamilnadu) ನೀರು ಬಿಟ್ಟ ಪರಿಣಾಮ ಇದು. ಸಿಎಂ ಜೊತೆಗೆ ಮೀಟಿಂಗ್ ಗೆ ನಾವು ಹೋಗಿದ್ವಿ. ಅಲ್ಲಿ ಮೀಟಿಂಗಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಬಂದು ನೀರು ಬಿಡ್ತಾರೆ. ನಮ್ಮ ಜಲಾಶಯದಲ್ಲಿ ನೀರಿಲ್ಲ ತಮಿಳುನಾಡಿಗೆ ಬಿಟ್ಟರು. ಮೀಟಿಂಗ್ ನಡೆಯುತ್ತಿರುವಾಗಲೇ ತಮಿಳುನಾಡಿಗೆ ನೀರು ಹರಿದು ಹೋಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶೋಭಾ ವಾಗ್ದಾಳಿ ನಡೆಸಿದರು.