ಚಿಕ್ಕಮಗಳೂರು: ಎಲ್ಲಾ ರಾಷ್ಟ್ರೀಯ ನಾಯಕರು ನಮ್ಮವರೇ. ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Advertisement
ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಶೋಭಾ ಕರಂದ್ಲಾಜೆಗೆ ನಗರ ಬಿಜೆಪಿ ಕಾರ್ಯಕರ್ತರು ಪೂರ್ಣಕುಂಭದ ಸ್ವಾಗತ ಕೋರಿದರು. ಇದೇ ವೇಳೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಕ್ಕಾ ಬಾರ್ ಹಾಗೂ ಎಣ್ಣೆ ಗಲಾಟೆಗೆ ಪ್ರತಿಕ್ರಿಯೆ ನೀಡಿ ಎಲ್ಲರೂ ನಮ್ಮ ಗೌರವಾನ್ವಿತ ನಾಯಕರು. ಅದಕ್ಕೆ ಜಾತಿ, ಪಕ್ಷ ಹಾಗೂ ಧರ್ಮದ ಭೇದವಿಲ್ಲ. ಅವರವರ ಕಾಲಘಟ್ಟದಲ್ಲಿ ಎಲ್ಲರೂ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಎಲ್ಲರೂ ಗೌರವಾನ್ವಿತರು ಎಂದರು. ಇದನ್ನೂ ಓದಿ: 2 ಡೋಸ್ ಲಸಿಕೆ ಪಡೆದ ವ್ಯಕ್ತಿ ಮತ್ತೆ ವ್ಯಾಕ್ಸಿನ್‍ಗಾಗಿ ಕೋರ್ಟ್ ಮೊರೆ!
Advertisement
Our #JanAshirwadYatra is being received with tremendous love & support in Chikmagalur district.
Addressed a huge gathering of Karyakartas in @BJP4Chikmagalur office.
Highlighted pro-people, pro-farmer schemes of PM Sri @narendramodi Ji led Govt. pic.twitter.com/cGuzyd3eVN
— Shobha Karandlaje (@ShobhaBJP) August 18, 2021
Advertisement
Advertisement
Visited Basava Tatva Peetha in Chikmagalur & garlanded Jagajyothi Sri Basaveshwara’s statue.
Met Pujya Sri Basava Marulasidda Swamiji&sought his blessings.
Lord Sri Basavanna devoted his life to service & social reform, his ideals are continuing to inspire us.#JanAshirwadYatra pic.twitter.com/MPk3dyk1ym
— Shobha Karandlaje (@ShobhaBJP) August 18, 2021
ಒಂದೇ ದಿನ ಜಿಲ್ಲೆಯ ಚಿಕ್ಕಮಗಳೂರು ನಗರ, ಆಲ್ದೂರು, ಬಾಳೆಹೊನ್ನೂರು, ಶೃಂಗೇರಿಯಲ್ಲಿ ನಾಲ್ಕು ಕಡೆ ಜನಾಶೀರ್ವಾದ ಯಾತ್ರೆ ನಡೆಸಿ ಕಾರ್ಯಕರ್ತರನ್ನ ಹುರಿದುಂಬಿಸಿದರು. ಬಳಿಕ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಜಗದ್ಗುರುಗಳ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಜಗದ್ಗುರು ವೀರ ಸೋಮೇಶ್ವರ ಶ್ರೀಗಳು ಶೋಭಾಗೆ ಕೆಲ ಸಲಹೆಗಳನ್ನ ನೀಡಿದರು. ಶೋಭಾ ಕರಂದ್ಲಾಜೆಗೆ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಸಚಿವ ಡಿ.ಎನ್ ಜೀವರಾಜ್ ಸಾಥ್ ನೀಡಿದರು.