ಕೃಷಿಕರ ಮಗಳಾಗಿದ್ದರಿಂದ ನನಗೆ ಕೃಷಿ ಖಾತೆ ಸಿಕ್ಕಿದೆ: ಶೋಭಾ ಕರಂದ್ಲಾಜೆ

Public TV
3 Min Read
Shobha Karandlaje

ಕಲಬುರಗಿ:  ನಾನೊಬ್ಬಳ್ಳು ಕೃಷಿಕರ ಮಗಳಾಗಿದ್ದು, ನನಗೆ ಕೃಷಿ ಮಂತ್ರಿ ಆಗೋ ಅವಕಾಶ ಸಿಕ್ಕಿದೆ, ಈ ಖಾತೆ ಬಹಳ ಕಷ್ಟಕರವಾದ ಖಾತೆ ಆದರೂ ಕೃಷಿ ತಜ್ಞರ ಮಾಹಿತಿ ಆಧರಿಸಿ ಉತ್ತಮ ಕೆಲಸ ಮಾಡುತ್ತೇನೆ ಎಂದು ನೂತನ ಕೃಷಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು, ರೈತರು ಎಷ್ಟೇ ಕೃಷಿ ಮಾಡಿದ್ದರೂ ನೆಮ್ಮದಿಸಿಲ್ಲ, ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ, ಅವರ ಕಷ್ಟಗಳ ನಿವಾರಣೆಗಾಗಿ ನಾನು ಬದ್ಧನಾಗಿದ್ದು, ಕೃಷಿ ಲಾಭದಾಯಕ ಅಲ್ಲ ಎನಿಸಿದೆ. ಹೀಗಾಗಿ ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಕೃಷಿಯಲ್ಲಿರುವ ಹಾಗೆ ಮಾಡೋದು ಸವಾಲಿನ ಕೆಲಸವಾಗಿದೆ. ಕೇಂದ್ರ ಸರ್ಕಾರದ ಕೃಷಿ ಸವಲತ್ತುಗಳನ್ನು ಪಡೆದುಕೊಳ್ಳಬೇಕೆ ಎಂದು ರೈತರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‍ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ: ಅಶ್ವಥ್ ನಾರಾಯಣ

Shobha Karandlaje Kalaburagi

ಕೇಂದ್ರದಲ್ಲಿನ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿಗಾಗಿ 2021ರಲ್ಲಿ ಕೇಂದ್ರ ಬಜೆಟ್‍ನಲ್ಲಿ ಕೃಷಿಗಾಗಿ 123000 ಕೋಟಿ ರೂ. ನೀಡಿದೆ. ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಾದ್ದಾರೆ. 2014ರ ಚುನಾವಣೆಯಲ್ಲಿ ಯುಪಿಎ ಸರಕಾರದ ಬಜೆಟ್‍ನಲ್ಲಿ 23 ಸಾವಿರ ಕೋಟಿ ಮಾತ್ರ ಕೃಷಿಗಾಗಿ ಮೀಸಲಾಡಲಾಗಿತ್ತು, ಆದರೆ ಮೋದಿಜಿಯವರ ನೇತೃತ್ವದ ಸರ್ಕಾರ ಸಾವಿರದಿಂದ ಲಕ್ಷಕ್ಕೆ ಏರಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಕ್ಕಳೊಂದಿಗೆ ತವರಿಗೆ ಹೊರಟ ಕರೀನಾ

ನಮ್ಮ ದೇಶದ ಕೃಷಿಯನ್ನು ವೈಜ್ಞಾನಿಕ ಜೊತೆಗೆ ಕೃಷಿ ರೈತರಿಗೆ ಲಾಭದಾಯಕ ಗೊಳಿಸೋದು ನಮಗೆ ಸವಾಲಿನ ಕೆಲಸವಾಗಿದೆ. ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು ವಿಶ್ವದಲ್ಲಿ 9ನೇ ಸ್ಥಾನಕ್ಕೆ ಬಂದಿದ್ದೇವೆ. ಶೇ. 70ರಷ್ಟು ಎಣ್ಣೆ ಕಾಳುಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಎಣ್ಣ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿ ಆಗಬೇಕು ಅಂದಾಗಿ ಮಾತ್ರ ಆಮದು ಪ್ರಮಾಣ ಕಡಿಮೆಯಾಗುತ್ತದೆ. ಎಣ್ಣೆ ಕಾಳು ಬಿತ್ತನೆ ಬೀಜಗಳನ್ನ ನಮ್ಮ ಸರ್ಕಾರ ರೈತರಿಗೆ ಉಚಿತವಾಗಿ ನೀಡುತ್ತಿದೆ ಎಂದರು.

Shobha Karandlaje Kalaburagi 2

ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು 20.22 ಪರ್ಸೆಂಟ್ ಆಗಿದ್ದು, ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ ಎಂದ ಅವರು ಸಣ್ಣ ರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೋಡುವ ಕೆಲಸ ಮಾಡಬೇಕಿದೆ. ಕೃಷಿ ಉತ್ಪನ್ನ ಉತ್ಪಾದನೆ, ಮಾರ್ಕೆಟಿಂಗ್‍ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ ಎಂದು ಹೇಳಿದರು.

ಇಥೇನಾಲ್ ಬೇಸ್ ಸಕ್ಕರೆ ಕಾರ್ಖಾನೆ ಆಗಬೇಕು, ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ತೊಗರಿ ಕಾಳಿಗೆ 6300, ಹೆಸರು ಕಾಳಿಗೆ 7200 ರೂ. ಎಂಎಸ್ ಪಿ ನಿಗದಿ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ನನಗೆ ಕೃಷಿ ಸಚಿವೆಯಾಗಿ ಕೆಲಸ ಮಾಡಲು ನಮ್ಮ ನಾಯಕರು ಅವಕಾಶ ಕೊಟ್ಟಿದ್ದಾರೆ, ಅತ್ಯಂತ ಪ್ರಮಾಣಿಕಪಾರದರ್ಶಕವಾಗಿ ಕೆಲಸ ಮಾಡುತ್ತೇನೆ ಎಂದರು.

Shobha Karandlaje Kalaburagi 1

ರೈತರ ಆತ್ಮಹತ್ಯೆಗಳು ಕಡಿಮೆ ಆಗಬೇಕಾದ್ರೆ, ರೈತರು ಮಿಶ್ರ ಬೆಳೆಗಳನ್ನು ಬೆಳೆಯಬೇಕು ಅಂದರೆ ಅವರ ಆದಾಯ ಹೆಚ್ಚಾಗಬೇಕು ಎಂದ ಕರಂದ್ಲಾಜೆ ಅವರು ಬೆಂಗಳೂರಿನಲ್ಲಿ ಇದೇ ತಿಂಗಳು 22ರಂದು ಕೃಷಿ ತಜ್ಞರ ಸಭೆ ಕರೆದಿದ್ದೇನೆ. ಹೋರಾಟನಿರತ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದರು.

ದೆಹಲಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರೈತರ ಚಳುವಳಿಗಾರರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೈತ ಮುಖಂಡರೊಂದಿಗೆ 11 ಸುತ್ತಿನ ಮಾತುಕತೆ ಆಗಿದ್ದು, ಕೃಷಿ ನೂತನ ಕಾಯಿದೆ ಬಿಲ್ ಏಕೆ ಮಾಡಿದ್ದೇವೆ ಅನ್ನೊದು ರೈತ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ಇದರಿಂದ ರೈತರಿಗೆ ಯಾವುದೇ ಹಾನಿಯಾಗುವುದಿಲ್ಲ ಬದಲಿಗೆ ರೈತರ ಪರವಾದ ಬಿಲ್ ಇದಾಗಿದೆ. ರೈತರ ಸಮಸ್ಯೆಗಳು, ಕೇಂದ್ರ ಸರ್ಕಾರ ರೈತರ ಪರವಾದ ಸರಕಾರವಾಗಿದೆ. ಈ ಹಿಂದೆ ಯಾರೂ ಮಾಡದ ರೈತರ ಪರ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *