ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಲೂಗಡ್ಡೆಯಿಂದ ಶ್ರೀಮಂತರಾದವರು. ಹಾಗಾಗಿ ಅವರಿಗೆ ನನಗಿಂತ ಹೆಚ್ಚು ರೈತರ ಕಷ್ಟ ಗೊತ್ತಿರಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್‍ಡಿಕೆಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಬಗ್ಗೆ ಶೋಭಾ ಕರಂದ್ಲಾಜೆಯವರಿಗೆ ಗೊತ್ತಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಕುಮಾರಸ್ವಾಮಿಯವರು ಏನು ಅನ್ನುವುದನ್ನು ಕಳೆದ ವರ್ಷದಲ್ಲಿ ಅವರೇ ತೋರಿಸಿದ್ದಾರೆ. ಅವರ ಆರೋಪಕ್ಕೆ ನಾನು ಹೆಚ್ಚು ಮಾತನಾಡುವುದಿಲ್ಲ. ನಾನು ರೈತ ಅಲ್ಲ ಅಂದರೆ ಇನ್ನೇನು ಎಂಬುದನ್ನು ಅವರೇ ಹೇಳಬೇಕು ಎಂದು ತಿರುಗೇಟು ನೀಡಿದರು.
Advertisement
Advertisement
ಕುಮಾರಸ್ವಾಮಿಯವರು ನಮ್ಮ ಊರಿಗೆ ಬಂದು ನೋಡಲಿ. ಕರಂದ್ಲಾಜೆ ಎಲ್ಲಿದೆ, ಚಾರವಾಕ ಎಲ್ಲಿದೆ ಎಂಬುದು ಅವರಿಗೆ ಗೊತ್ತಾದರೆ, ಯಾರು ರೈತರು, ಯಾರು ರೈತರಲ್ಲ ಎಂಬುದು ಅವರಿಗೆ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.
Advertisement
ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ವಾಗ್ದಾಳಿ ನಡೆಸಿ, ಶೋಭಾ ಕರಂದ್ಲಾಜೆ ಅವರಿಗೆ ರೈತರು ಎಂದರೆ ಗೊತ್ತಿದೆಯೇ, ಹೇಗೋ ಬಿಜೆಪಿ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಜನ ಬಿಜೆಪಿ ಹೆಸರಲ್ಲಿ ಮತ ಹಾಕುತ್ತಾರೆ, ಮತ ಹಾಕಿಸಿಕೊಂಡು ಮಾತನಾಡುತ್ತ ತಿರುಗಿಕೊಂಡು ಇದ್ದಾರೆ. ಅವರಿಗೆ ರೈತರನ್ನು ಕಟ್ಟಿಕೊಂಡು ಏನಾಗಬೇಕು ಎಂದು ಕಿಡಿಕಾರಿದ್ದರು.
Advertisement
ಶೋಭಾ ಕರಂದ್ಲಾಜೆ ಅವರು ಇಂದು ಮೈಸೂರಿನ ಅರಮನೆ ಆವರಣದಲ್ಲಿ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಮಾಡಿದ್ದರು. ಶೋಭಾ ಅವರು ಪ್ರತಿವರ್ಷ ಉಪಹಾರ ವ್ಯವಸ್ಥೆ ಮಾಡುತ್ತಾರೆ, ಅದೇ ರೀತಿ ಈ ವರ್ಷವೂ ಮಾಡಿದ್ದರು. ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಹಾಲುಬಾಯಿ, ಖಾರಾಬಾತ್ ಉಪಹಾರವನ್ನು ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬದ ಸದಸ್ಯರು ಸೇವಿಸಿದರು. ಒಟ್ಟು 40 ಕುಟುಂಬದ 300 ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮಹಿಳೆಯರಿಗೆ ಸೀರೆಯನ್ನು ಸಹ ವಿತರಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶೋಭಾ ಕರಂದ್ಲಾಜೆ ಅವರಿಗೆ ಸಾಥ್ ನೀಡಿದರು.