ಶ್ರೀನಗರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಹುದ್ದೆಗೇರಲಿ ಎಂದು ಅಮರನಾಥಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Feel so blessed to have had the blissful darshan of Shri Amarnath Ji.
Have prayed for the well-being of countrymen and the thumping victory of PM Sri @narendramodi Ji in the coming Lok Sabha Elections.#Amarnathyatara2023 pic.twitter.com/TgXvkYGyAb
— Shobha Karandlaje (@ShobhaBJP) August 5, 2023
ಈ ಕುರಿತು ಟ್ವಿಟ್ಟರ್‌ನಲ್ಲಿ ವೀಡಿಯೋ ಸಮೇತ ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಅಮರನಾಥ ದರ್ಶನ ಪಡೆದು ಧನ್ಯಳಾಗಿದ್ದೇನೆ. ದೇಶವಾಸಿಗಳ ಯೋಗಕ್ಷೇಮ ಮತ್ತು ನರೇಂದ್ರ ಮೋದಿ (Narendra Modi) ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ತಂದೆ, ಮಗ ಸೇರಿ ಮೂವರು ಬಲಿ
Blessed to have taken darshan of Holy Shiva Lingam in Shri Amarnath Ji.
I express my heartfelt gratitude to all the hard-working staffs of Amarnath Shrine Board & security personal for ensuring the safety.
Kudos to Sri @manojsinha_ Ji for ensuring a smoother pilgrimage to all! pic.twitter.com/u6UQ38dv3x
— Shobha Karandlaje (@ShobhaBJP) August 5, 2023
ಶ್ರೀ ಅಮರನಾಥದಲ್ಲಿರುವ ಪವಿತ್ರ ಶಿವಲಿಂಗದ ದರ್ಶನ ಪಡೆದೆ. ನನ್ನ ಯಾತ್ರೆಗೆ ಸಹಕಾರಿಯಾದ ಅಮರನಾಥ ದೇಗುಲ ಮಂಡಳಿಯ ಎಲ್ಲಾ ಸಿಬ್ಬಂದಿ ಮತ್ತು ಭದ್ರತಾ ತಂಡಕ್ಕೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲರ ಸುಗಮ ಯಾತ್ರೆಗೆ ಅನುವು ಮಾಡಿಕೊಟ್ಟಿರುವ ಮನೋಜ್ ಸಿನ್ಹಾ ಅವರಿಗೆ ವಂದನೆಗಳು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ
Web Stories