ಭೂಪಾಲ್: ಶಿವರಾತ್ರಿ (Shivratri) ಹಬ್ಬದ ಆಚರಣೆ ವೇಳೆ ಪ್ರಾರ್ಥನೆ ಸಲ್ಲಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ 14 ಜನ ಗಾಯಗೊಂಡ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.
Advertisement
ಶಿವರಾತ್ರಿ ಹಿನ್ನೆಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೆಲವರು ಪ್ರಾರ್ಥನೆ ಸಲ್ಲಿಸಲು ಛಾಪ್ರಾ ಗ್ರಾಮದ ಶಿವ ದೇವಾಲಯಕ್ಕೆ (Temple) ತೆರಳಿದ್ದರು. ಆಗ ಮೇಲ್ವರ್ಗದ ಕೆಲವರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ
Advertisement
ಜಗಳದಲ್ಲಿ ಎರಡೂ ಕಡೆಯವರು ಪರಸ್ಪರ ಕಲ್ಲು ಎಸೆದುಕೊಂಡಿದ್ದಾರೆ. ಈ ಘಟನೆಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.
Advertisement
ಪ್ರೆಮ್‍ಲಾಲ್ ಎಂಬುವವರು ನೀಡಿರುವ ದೂರಿನಲ್ಲಿ ಗುರ್ಜರ್ ಸಮುದಾಯದ ಬಯ್ಯಾ ಲಾಲ್ ಪಟೇಲ್ ಬೆಂಬಲಿತ ಗುಂಪು ದಲಿತ ಬಾಲಕಿಯರು ದೇಗುಲ ಪ್ರವೇಶಿಸದಂತೆ ತಡೆದಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಈ ದೂರಿನನ್ವಯ ಪೊಲೀಸರು 17 ಜನ ಶಂಕಿತ ಆರೋಪಿಗಳು ಹಾಗೂ 25 ಜನ ಅಪರಿಚಿತರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪ್ರತಿ ದೂರು ದಾಖಲಿಸಿರುವ ರವೀಂದ್ರ ರಾವ್ ಮರಾಠ ಎಂಬುವವರು, ಪ್ರೇಮ್‍ಲಾಲ್ ಮತ್ತು ಆತನ 33 ಬೆಂಬಲಿಗರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ದೇಗುಲ ಪ್ರವೇಶವನ್ನು ಯಾರು ತಡೆಯಬಾರದು ಎಂದು ಎರಡು ವರ್ಗಗಳಿಗೂ ಮನವರಿಕೆ ಮಾಡಿದರು. ಕೆಲವು ದಿನಗಳಿಂದ ಗ್ರಾಮದಲ್ಲಿ ಅಂಬೇಡ್ಕರ್ (Ambedkar) ಪುತ್ಥಳಿ ನಿರ್ಮಿಸುವ ವಿಚಾರ ಹಾಗೂ ಕೆಲವರು ಪವಿತ್ರವೆಂದು ಭಾವಿಸುವ ಆಲದ ಮರ ಕಡಿಯುವ ವಿಚಾರದಲ್ಲಿ ಅಶಾಂತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ: ನಾರಾಯಣ ಗೌಡ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k