ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿ ಶಿವರಾಜ್ ಸಿಂಗ್ ಚೌಹಾನ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಲಾಲ್ಜಿ ಟಂಡನ್ ಶಿವರಾಜ್ ಸಿಂಗ್ ಚೌಹಾನ್ ಪ್ರಮಾಣ ವಚನ ಬೋಧಿಸಿದರು.
15 ಕಾಂಗ್ರೆಸ್ ಶಾಸಕರ ರಾಜೀನಾಮೆ ಜೊತೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಂಡ ಪರಿಣಾಮ 15 ತಿಂಗಳ ಕಮಲ್‍ನಾಥ್ ಸರ್ಕಾರ ಪತನವಾಯ್ತು. ಇನ್ನು ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ವರದಿಯಾಗಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲದೇ ಬಿಎಸ್‍ಪಿ, ಎಸ್‍ಪಿ ಮತ್ತು ಪಕ್ಷೇತರ ಶಾಸಕ ಸಹ ಬಹುತೇಕರು ಕಮಲ ಹಿಡಿಯಲು ಬಿಜೆಪಿ ಬಾಗಿಲ ಬಳಿ ನಿಂತಿದ್ದಾರೆ ಎನ್ನಲಾಗಿದೆ.
https://twitter.com/BJP4MP/status/1242096351455789056
ಕಾಂಗ್ರೆಸ್, ಬಿಎಸ್‍ಪಿ ಮತ್ತು ಎಸ್‍ಪಿ ಸೇರಿದಂತೆ ಸುಮಾರು 10 ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕಮಲ್‍ನಾಥ್ ಸರ್ಕಾರದ ಸಂಪುಟದಲ್ಲಿದ್ದ ಮಾಜಿ ಮಂತ್ರಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ಬಗ್ಗೆ ನಿರ್ಧರಿಸಲಿದೆ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
आप की शुभकामनाओं के लिए हृदय की गहराइयों से धन्यवाद।
मेरी सबसे पहली प्राथमिकता #COVIDー19 से मुक़ाबला है।
बाक़ी सब बाद में…
— Shivraj Singh Chouhan (@ChouhanShivraj) March 23, 2020