ಪಣಜಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇವರ ಸ್ವರೂಪ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಹಾಡಿ ಹೊಗಳಿದ್ದಾರೆ.
ಗೋವಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಾಮಾನ್ಯ ಮನುಷ್ಯರಲ್ಲ ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದಾರೆ. ದೇವರ ಸ್ವರೂಪವಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಗೋವಾದಲ್ಲಿ ಮೂರು ಪಕ್ಷಗಳಿವೆ. CAT(ಬೆಕ್ಕು)ನಂತೆ ಸಿ(C) ಎಂದರೆ ಕಾಂಗ್ರೆಸ್ ಎ(A) ಎಂದರೆ ಎಎಪಿ ಹಾಗೂ ಟಿ(T) ಎಂದರೆ ಟಿಎಂಸಿ ಎಂದು ಪಕ್ಷಗಳಿವೆ. ಬೆಕ್ಕು ನಾವು ಹೋಗುವ ದಾರಿಯಲ್ಲಿ ಅಡ್ಡವಾಗಿ ಹಾದು ಹೋದರೆ ನಾವು ಹೋಗಿದ್ದ ಕೆಲಸ ಹಾಳಾಗುವುದು ಖಚಿತ. ಹೀಗಾಗಿ ಈ ಮೂರು ಪಕ್ಷಗಳು ಬೆಕ್ಕಿನ ರೂಪ ಎಂದು ಹೇಳು ಹೇಳುವ ಮೂಲಕವಾಗಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶೆಯನ್ನು ಕೊನೆಗೊಳಿಸಲು ಜನಿಸಿದ ಭಗವಾನ್ ರಾಮನಂತೆ ಎಂದು ಮೋದಿಯವರನ್ನು ದೇವರಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.