ಭೋಪಾಲ್: ಮೋಹನ್ ಯಾದವ್‌ರನ್ನು (Mohan Yadav) ಮಧ್ಯಪ್ರದೇಶ ಸಿಎಂ (Madhya Pradesh Chief Minister) ಆಗಿ ಹೈಕಮಾಂಡ್ ಆಯ್ಕೆಮಾಡಿದ ಹಿನ್ನೆಲೆಯಲ್ಲಿ ಹಾಲಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ (63) ಅವರ ರಾಜಕೀಯ ಭವಿಷ್ಯ ಏನು ಎಂಬ ಗಂಭೀರ ಪ್ರಶ್ನೆ ಎದ್ದಿದೆ.
1990ರಲ್ಲಿ ಮೊದಲ ಬಾರಿಗೆ ಶಾಸಕರಾದ ಚೌಹಾಣ್ (Shivraj Singh Chouhan) 1991-05ರವರೆಗೆ ಸಂಸದರಾಗಿ ಆಯ್ಕೆ ಆಗಿದ್ದರು. 2005ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಇವರು ಒಟ್ಟು 4 ಬಾರಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
Advertisement
Advertisement
ಬಿಜೆಪಿಗೆ (BJP) ಆಡಳಿತ ವಿರೋಧಿ ಅಲೆ ಇದೆ ಎಂದಾಗ ಚುನಾವಣೆಗೂ (Election) ಮುನ್ನ ಹಲವು ಜನಪ್ರಿಯ ಯೋಜನೆ ಜಾರಿಗೊಳಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಹುದ್ದೆಗೆ ಮೋಹನ್ ಯಾದವ್ ಅಚ್ಚರಿ ಆಯ್ಕೆ – ಇಬ್ಬರಿಗೆ ಡಿಸಿಎಂ ಸ್ಥಾನ
Advertisement
ಅಚ್ಚರಿಯ ಪ್ರಯೋಗ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಿಜೆಪಿ ಹೈಕಮಾಂಡ್ (BJP High Command) ಈ ಬಾರಿ ಚೌಹಾಣ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚೌಹಾಣ್ ಅವರಿಗ ಟಿಕೆಟ್ ನೀಡುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಗೆದ್ದಲ್ಲಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಮಾಡಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.
Advertisement
ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಚೌಹಾಣ್ ಆಯ್ಕೆ ಆಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 1.04 ಲಕ್ಷ ಮತಗಳ ಅಂತರಿಂದ ಭರ್ಜರಿ ಜಯ ಸಾಧಿಸಿದ್ದರು. ಚೌಹಾಣ್ 1,64,951 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಕ್ರಂ ಶರ್ಮಾ 59,977 ಮತಗಳನ್ನು ಪಡೆದಿದ್ದರು.