ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಈ ಬಾರಿ ಅದ್ಧೂರಿ ಮತ್ತು ಸಡಗರದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ಈ ವರ್ಷ ಅವರಿಗೆ 60 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಗ್ರ್ಯಾಂಡ್ ಆಗಿಯೇ ಹುಟ್ಟು ಹಬ್ಬ ಆಚರಿಸಬೇಕೆಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಆದರೆ, ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಸಿಂಪಲ್ಲಾಗಿ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ ಶಿವರಾಜ್ ಕುಮಾರ್.
Advertisement
ಒಂದು ಬೈರಾಗಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಬೈರಾಗಿ ಸಿನಿಮಾ ಕುರಿತು ಹಲವು ಕಾರ್ಯಕ್ರಮಗಳನ್ನು ಹುಟ್ಟು ಹಬ್ಬಕ್ಕೂ ಮುನ್ನ ಚಿತ್ರತಂಡ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕಾಗಿ ಹತ್ತು ದಿನ ಮೊದಲೇ ಬೈರಾಗಿ ಸಿನಿಮಾ ರಿಲೀಸ್ ಆಗುತ್ತಿದ್ದು, ಚಾಮರಾಜನಗರದಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ
Advertisement
Advertisement
ಜೂ.25 ರಂದು ಚಾಮರಾಜ ನಗರದಲ್ಲಿ ಪ್ರೀ ಇವೆಂಟ್ ಕಾರ್ಯಕ್ರಮ ಆಯೋಜನೆಯಾಗಿದ್ದರೆ, 24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ನಡೆಯಲಿದೆ. 24 ರಂದು ರಾತ್ರಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ, ಮರುದಿನವೇ ಈವೆಂಡ್ ನಡೆಯಲಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಈ ಸಿನಿಮಾ ಟೀಸರ್ ಮತ್ತು ಹಾಡುಗಳಿಂದ ನಿರೀಕ್ಷೆ ಮೂಡಿಸಿದ್ದು, ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ.